ಆಧ್ಯಾತ್ಮದ ಆಸರೆ ಬಯಸಿ ರಿಷಿಕೇಶದ ಆಶ್ರಮಕ್ಕೆ ಭೇಟಿ ನೀಡಿದ ಸಮಂತಾ

ವಿಚ್ಛೇದನದ ನಂತರ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿರುವ ಸಮಂತಾ ರುತ್ ಪ್ರಭು ಅವರೀಗ ಆಧ್ಯಾತ್ಮದ ಕಡೆಗೆ ವಾಲುತ್ತಿರುವ ಲಕ್ಷಣಗಳು ಕಾಣುತ್ತಿವೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದು ಇದಕ್ಕೆ ಪುಷ್ಟಿ ನೀಡುತ್ತಿದೆ.
ಹೌದು, ಸಮಂತಾ ಅವರೀಗ ರಿಷಿಕೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರ ಸ್ನೇಹಿತೆ ಹಾಗೂ ಮಾಡೆಲ್ ಆಗಿರುವ ಶಿಲ್ಪಾ ರೆಡ್ಡಿಯೊಂದಿಗೆ ಆಶ್ರಮವೊಂದನ್ನು ಸೇರಿದ್ದಾರೆ.
ಈ ಕುರಿತ ಚಿತ್ರವೊಂದನ್ನು ಹಂಚಿಕೊಂಡಿರುವ ಸಮಂತಾ ಅವರು ರಿಷಿಕೇಶದಲ್ಲಿರುವ ಮಹರ್ಷಿ ಯೋಗಿ ಆಶ್ರಮದಲ್ಲಿ(ಬೀಟಲ್ಸ್ ಆಶ್ರಮ) ಇರುವುದಾಗಿ ತಿಳಿಸಿದ್ದಾರೆ. ಆಶ್ರಮದಲ್ಲಿ ಹೇಳಿಕೊಡುವ 'ಅತೀಂದ್ರಿಯ ಧ್ಯಾನ'ದ ಕುರಿತಾಗಿಯೂ ಸಮಂತಾ ಬರೆದುಕೊಂಡಿದ್ದಾರೆ.
2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಮದುವೆಯಾಗಿದ್ದರು. ಅಕ್ಟೋಬರ್ 2ರಂದು ವಿಚ್ಛೇದನ ಘೋಷಿಸಿದ ನಂತರ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದಾರೆ.
ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದ ಪ್ರೊಡಕ್ಷನ್ ನಂ: 30 ಚಿತ್ರಕ್ಕೆ ಸಮಂತಾ ಸಹಿ ಹಾಕಿದ್ದಾರೆ. ಈ ಚಿತ್ರ ಎರಡು ಭಾಷೆಗಳಲ್ಲಿ ತಯಾರಾಗಲಿದೆ. ಶಾಂತರುಬನ್ ಜ್ಞಾನಶೇಖರನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.