ಗುರುವಾರ , ನವೆಂಬರ್ 21, 2019
20 °C

ಸಮಂತಾ, ಶರ್ವಾನಂದ್‌ ಜೋಡಿಯ ‘96’

Published:
Updated:
Prajavani

ಮೆಲುವಾದ ಹಾಡುಗಳು, ಅದಕ್ಕೆ ತಕ್ಕಂತ ನಟನೆ, ಮೋಡಿ ಮಾಡುವ ದೃಶ್ಯಗಳು ..ಇವು ತಮಿಳಿನಲ್ಲಿ ಬಿಡುಗಡೆಗೊಂಡಿದ್ದ ‘96’ ಸಿನಿಮಾಕ್ಕೆ ಬಂದಿದ್ದ ಮೆಚ್ಚುಗೆ.

ವಿಜಯ್‌ ಸೇತುಪತಿ ಹಾಗೂ ತ್ರಿಷಾ ಅಭಿನಯದ ಈ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈಗ ಈ ಚಿತ್ರದ ತೆಲುಗು ರಿಮೇಕ್‌ನಲ್ಲಿ ನಟಿ ಸಮಂತಾ ಅಕ್ಕಿನೇನಿ ಅಭಿನಯಿಸುತ್ತಿದ್ದಾರೆ.

ಶರ್ವಾನಂದ್ ಹಾಗೂ ಸಮಂತಾ ಜೋಡಿ ಈ ಸಿನಿಮಾದಲ್ಲಿ ನಟಿಸಲಿದೆ ಎಂದು ಸಿನಿಮಾ ತಂಡ ಹೇಳಿದೆ. ಸಿ.ಪ್ರೇಮ್‌ ಕುಮಾರ್‌ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಸಮಂತಾ ಬರೆದುಕೊಂಡಿದ್ದಾರೆ. ‘ನನಗೆ ಇದು ಸವಾಲಿನ ಪಾತ್ರ. ಹಿಂದಿನ ಎಲ್ಲಾ ಪಾತ್ರಗಳಿಗಿಂತ ಇದು ಮುಖ್ಯವಾದದ್ದು, ಪ್ರೇಮ್‌ಕುಮಾರ್ ಅವರು ನನ್ನನ್ನು ನಂಬಿ ಈ ಪಾತ್ರ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಹೇಳಲೇಬೇಕು’ ಎಂದು ಸಮಂತಾ ಬರೆದಿದ್ದಾರೆ.

‘96’ ಸಿನಿಮಾದ ಬಹುತೇಕ ಭಾಗವನ್ನು ವಿಶಾಖಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿತ್ತು. ಮಾಲ್ಡೀವ್ಸ್ ಮತ್ತು ಕೀನ್ಯಾದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಲಾಗಿತ್ತು. ವೈಲ್ಡ್‌ಲೈಫ್‌ ಫೋಟೊಗ್ರಾಫರ್ ಜೀವನವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಶಾಲಾದಿನಗಳಲ್ಲೇ ಹುಟ್ಟಿದ ಪ್ರೀತಿ ನಾಯಕನ ಬದುಕಿನಲ್ಲಿ ಬೇರೆ ಬೇರೆ ತಿರುವುಗಳನ್ನು ಸೃಷ್ಟಿಸುತ್ತದೆ.

ತಮಿಳು ಸಿನಿಮಾದಲ್ಲಿ ಗೋವಿಂದ ವಸಂತ ಅವರ ಸಂಗೀತ ಹೆಚ್ಚು ಜನಮನ್ನಣೆ ಪಡೆದಿತ್ತು. ತೆಲುಗಿನ ಅವತರಣಿಕೆಯಲ್ಲೂ ಅವರೇ ಸಂಗೀತದ ಹೊಣೆ ಹೊತ್ತಿದ್ದಾರೆ. ಸೀತಾರಾಮ ಶಾಸ್ತ್ರಿ ಅವರ ಸಾಹಿತ್ಯ ಇದೆ. ದಿಲ್‌ ರಾಜು ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ.

 

ಪ್ರತಿಕ್ರಿಯಿಸಿ (+)