ಶುಕ್ರವಾರ, ಮೇ 27, 2022
27 °C
ಆ.12ಕ್ಕೆ ಈ ಪ್ಯಾನ್‌ ಇಂಡಿಯಾ ಸಿನಿಮಾ ರಿಲೀಸ್‌

ಸಮಂತಾ ನಟನೆಯ 'ಯಶೋದಾ' ಫಸ್ಟ್‌ ಗ್ಲಿಮ್ಸ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಂತಾ

ಶ್ರೀದೇವಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, ನಟಿ ಸಮಂತಾ ರುತ್‌ಪ್ರಭು ಅಭಿನಯದ ‘ಯಶೋದ’ ಸಿನಿಮಾದ ಫಸ್ಟ್‌ ಗ್ಲಿಮ್ಸ್‌ ಬಿಡುಗಡೆಯಾಗಿದೆ. ನಾಯಕಿ ಪ್ರಧಾನ ಈ ಸಿನಿಮಾದಲ್ಲಿ ಸಮಂತಾ ‘ಯಶೋದ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಚಿತ್ರೀಕರಣದ ಜೊತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.

ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಶಿವಲೆಂಕಾ ಕೃಷ್ಣಪ್ರಸಾದ್‌ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಫ್ಯಾಮಿಲಿ ಮ್ಯಾನ್‌ 2’ ವೆಬ್‌ ಸಿರೀಸ್‌ ಮೂಲಕ ಸಮಂತಾ ದೇಶವ್ಯಾಪಿ ಹೆಸರು ಮಾಡಿದ್ದಾರೆ. ಆ ಕಾರಣಕ್ಕೆ ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಈ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ಕೃಷ್ಣಪ್ರಸಾದ್‌.

‘ಚಿತ್ರದ ಕ್ಲೈಮ್ಯಾಕ್ಸ್‌ ಹಂತವನ್ನು ಕೊಡೈಕೆನಾಲ್‌ನಲ್ಲಿ ಚಿತ್ರೀಕರಿಸಿದ್ದೇವೆ. ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಹೈದರಾಬಾದ್‌ನಲ್ಲಿ ಕೊನೆಯ ಶೆಡ್ಯೂಲ್‌ ನಡೆಯುತ್ತಿದೆ. ಜೂನ್‌ 1ಕ್ಕೆ ಚಿತ್ರೀಕರಣ ಪೂರ್ಣಗೊಳಿಸಲಿದ್ದೇವೆ. ಇಡೀ ಸಿನಿಮಾದಲ್ಲಿ ಗ್ರಾಫಿಕ್ಸ್‌ ಪ್ರಮುಖ ಪಾತ್ರ ವಹಿಸಲಿದೆ’ ಎಂದರು.

ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಆ.12ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉಣ್ಣಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮಣಿಶರ್ಮಾ ಸಂಗೀತ ಚಿತ್ರಕ್ಕಿದ್ದು, ಪಲ್ಗುಮ್‌ ಚಿನ್ನರಾಯನ, ಡಾ. ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್‌ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ, ಎಂ. ಸುಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಮಾರ್ತಾಂಡ್‌ ವೆಂಕಟೇಶ್‌ ಸಂಕಲನ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು