ನಟಿ,ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದ ತಾರೆ ಸಮೀರಾ ರೆಡ್ಡಿಈಗ ಫಿಟ್‌ನೆಸ್ ಕಡೆಗೆ ಹೊರಳಿದ್ದಾರೆ.

ಆಗಾಗ ಜಾಲತಾಣಗಳಲ್ಲಿ ತಮ್ಮ ಕುಟುಂಬದವರೊಂದಿಗೇ ಕಾಣಿಸಿಕೊಳ್ಳುವ ಸಮೀರಾ ಈಗ ಯುವ ವಯಸ್ಸಿನ ತಾಯಂದಿರು ಎದುರಿಸುತ್ತಿರುವ ಸಮಸ್ಯೆಗಳು, ಬಾಡಿ ಶೇಮಿಂಗ್ ಇತರ ವಿಷಯಗಳ ಕುರಿತು ಪ್ರತಿ ಶುಕ್ರವಾರ ಮಾತನಾಡಲು ಆರಂಭಿಸಿದ್ದಾರೆ.

ಫ್ರೈಡೇ ಫಿಟ್ನೆಸ್ ಸೆಷನ್ಸ್ ಕಾರ್ಯಕ್ರಮದಲ್ಲಿ ಅವರು ಈ ಎಲ್ಲ ವಿಚಾರಗಳ ಕುರಿತು ಚರ್ಚಿಸುತ್ತಾರೆ. ಸಮೀರಾ ಅವರೂ ಕೂಡಾ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. ಈ ಚಿತ್ರ, ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಂಚುವ ಮೂಲಕ ಅಭಿಮಾನಿಗಳೂ ಈ ಫಿಟ್ನೆಸ್ ಪ್ರಯಣದಲ್ಲಿ ಜತೆಯಾಗುವಂತೆ ಹುರಿದುಂಬಿಸುತ್ತಿದ್ದಾರೆ.

‘ನಾನು ದಣಿದಿದ್ದೇನೆ ಆದರೆ ಈ ಬೆಳಿಗ್ಗೆ 45 ನಿಮಿಷಗಳ ಯೋಗ ಮಾಡುತ್ತೇನೆ. ಹಾಗೆಂದು ನಾನು ಈ ಕೆಲಸದಿಂದ ಹಿಂದಕ್ಕೆ ಸರಿಯುವುದಿಲ್ಲ. ನಾನು 91 ಕೆಜಿಯಿಂದ 90.6ಕ್ಕೆ ಇಳಿದಿದ್ದೇನೆ. ತಿನ್ನುವ ವೇಳೆಯೂ ಬದಲಾಗಿದೆ. ಬೆಳಗ್ಗೆ 7ರಿಂದ ಸಂಜೆ ವರೆಗೆ ಮಾತ್ರ ನಾನು ಅಗತ್ಯ ಪ್ರಮಾಣದ ಆಹಾರ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ.

ಬೆಳಗಿನ ಡಯೆಟ್‌ನಲ್ಲಿ ಸಾಕಷ್ಟು ನೀರು, ಹಾಲು, ಸಕ್ಕರೆ ಹಾಕದ, ಗಿಡಮೂಲಿಕೆ ಮಿಶ್ರಣವುಳ್ಳ ಚಹಾ ಕುಡಿಯುತ್ತೇನೆ. ಶಕ್ತಿಗಾಗಿ ಸ್ವಲ್ಪ ತಿಂಡಿ ತಿನ್ನಲೇ ಬೇಕಾಗುತ್ತದೆ. ಬಳಲಿಕೆ ನಿವಾರಣೆಗೆ ಸ್ವಲ್ಪ ಸಿಹಿ ತಿಂಡಿಗಳನ್ನು ತಿನ್ನುತ್ತೇನೆ ಎಂದು ಸಮೀರಾ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.