ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳು, ಮಲಯಾಳಂನಲ್ಲಿ ವಿಭಿನ್ನ ಚಿತ್ರಗಳನ್ನು ಸ್ವೀಕರಿಸುತ್ತಾರೆ: ಶಿವರಾಜ್‌ಕುಮಾರ್

Published : 10 ಸೆಪ್ಟೆಂಬರ್ 2024, 22:49 IST
Last Updated : 10 ಸೆಪ್ಟೆಂಬರ್ 2024, 22:49 IST
ಫಾಲೋ ಮಾಡಿ
Comments

‘ಕೆಂಡಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್, ಧನ್ಯಾ ರಾಮ್‌ಕುಮಾರ್ ಜೋಡಿಯಾಗಿ ನಟಿಸಿರುವ ‘ಕಾಲಾಪತ್ಥರ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶಿವರಾಜ್‌ಕುಮಾರ್‌ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

‘ತಮಿಳು, ಮಲಯಾಳಂನಲ್ಲಿ ವಿಭಿನ್ನ ರೀತಿಯ ಸಿನಿಮಾಗಳನ್ನು ಸ್ವೀಕರಿಸುತ್ತಾರೆ. ಯಾಕೆಂದರೆ ಅವರು ಸಿನಿಮಾವನ್ನು ಒಂದೇ ಆಯಾಮದಿಂದ ನೋಡುವುದಿಲ್ಲ. ಎಲ್ಲ ಆಯಾಮದಿಂದ ನೋಡುತ್ತಾರೆ. ನಿರ್ದೇಶನ, ನಟನೆ, ಚಿಕ್ಕಪಾತ್ರಗಳು ಎಲ್ಲವನ್ನೂ ಗುರುತಿಸುತ್ತಾರೆ. ನಮ್ಮಲ್ಲಿಯೂ ಉತ್ತಮ ಚಿತ್ರಗಳನ್ನು ಗುರುತಿಸಬೇಕು. ‘ಕಾಲಾಪತ್ಥರ್‌’ ಕೂಡ ಭರವಸೆಯ ಸಿನಿಮಾ. ವಿಕ್ಕಿ ಮೊದಲ ಸಿನಿಮಾದಿಂದಲೂ ಶೀರ್ಷಿಕೆಯಲ್ಲಿ ‘ಕೆ’ ಪದ ಬಿಟ್ಟಿಲ್ಲ. ಕಿಂಗ್‌ ಆ್ಯಟಿಟ್ಯೂಡ್‌ ಇರುವವರು ‘ಕೆ’ ಪದವನ್ನು ಬಳಸುತ್ತಾರೆ’ ಎಂದರು ಶಿವಣ್ಣ.

ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಚಿತ್ರಕ್ಕೆ ವಿಕ್ಕಿ ಆ್ಯಕ್ಷನ್‌ ಕಟ್‌ ಕೂಡ ಹೇಳಿದ್ದಾರೆ.

‘ನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇ‌ನೆ.‌ ಈ ಸಿನಿಮಾಕ್ಕಾಗಿ ಏಳು ವರ್ಷ ಶ್ರಮಿಸಿದ್ದೇನೆ’ ಎಂದರು ವಿಕ್ಕಿ.

ಚಿತ್ರದಲ್ಲಿ ನಟಿಸಿರುವ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT