ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನಾಸಂ ಸತೀಶ್‌ಗೆ ನಿರ್ದೇಶನದ ಯೋಚನೆ

Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

‘ಮಾದೇಶ’ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟ ನಿನಾಸಂ ಸತೀಶ್‌ ನಟನಾಗಿ 15 ವರ್ಷ, ನಾಯಕನಾಗಿ 10 ವರ್ಷಗಳು ಕಳೆದಿವೆ. ‘‘2003ರಲ್ಲಿ ನಿನಾಸಂ ಸೇರಿಕೊಂಡೆ. ನಾಟಕ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದವನಿಗೆ 2008ರಲ್ಲಿ ಚಿತ್ರರಂಗದಲ್ಲಿ ಅವಕಾಶ ಲಭಿಸಿತು. ‘ಪರಮಪದ’ ಎಂಬ ಧಾರಾವಾಹಿಯಲ್ಲಿ ನಟಿಸುವಾಗ ಯೋಗರಾಜ್‌ ಭಟ್ಟರ ಪರಿಚಯವಾಯಿತು. ‘ಮನಸಾರೆ’ ಸಿನಿಮಾದಲ್ಲಿ ಅವಕಾಶ ನೀಡಿದರು. ‘ಡ್ರಾಮಾ’ ವೃತ್ತಿ ಬದುಕಿನ ಟರ್ನಿಂಗ್‌ ಪಾಯಿಂಟ್‌. ‘ಲೂಸಿಯಾ’ ಸಿನಿಮಾದಿಂದ ನಾಯಕ ಎನಿಸಿಕೊಂಡೆ. ಮೊದಲ ಸಿನಿಮಾದಲ್ಲಿಯೇ ಯಶಸ್ಸು, ಪ್ರಶಸ್ತಿ ಎಲ್ಲವೂ ಸಿಕ್ಕಿದೆ’’ ಎಂದು ನಿನಾಸಂ ಸತೀಶ್‌ ತೃಪ್ತಭಾವ ವ್ಯಕ್ತಪಡಿಸಿದರು.

ಸತೀಶ್‌ ಅವರ ‘ಮ್ಯಾಟ್ನಿ’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ‘ಅಶೋಕ ಬ್ಲೇಡ್‌’ ಶೇ 70ರಷ್ಟು ಚಿತ್ರೀಕರಣವಾಗಿದೆ. ತಮಿಳಿನಲ್ಲಿ ಕೂಡ ನಟಿಸಿದ್ದಾರೆ. ‘‘ಯೋಗರಾಜ್‌ ಭಟ್ಟರ ತಂಡದೊಂದಿಗಿನ ದಿನಗಳನ್ನು ಯಾವತ್ತಿಗೂ ನೆನಪಿಸಿಕೊಳ್ಳಬೇಕು. ಯಶಸ್ಸಿಗಾಗಿ ಪರದಾಡುತ್ತಿದ್ದ ದಿನಗಳವು. ಜೊತೆಗೆ ಕೆಲಸ ಕಲಿಯುವ ವೇದಿಕೆಯಾಗಿತ್ತು. ನಿರ್ದೇಶಕ ಪವನ್‌ಕುಮಾರ್‌ ಪರಿಚಯವಾಗಿದ್ದು ಅಲ್ಲಿಯೇ. ‘ಪಂಚರಂಗಿ’, ‘ಲೈಫು ಇಷ್ಟೇನೇ’ ಸಿನಿಮಾಗಳಲ್ಲಿ ಜೊತೆಗೆ ಕೆಲಸ ಮಾಡಿದ್ದೆವು. ಆ ಕಾರಣದಿಂದಲೇ ‘ಲೂಸಿಯಾ’ದಲ್ಲಿ ಅವಕಾಶ ನೀಡಿದರು. ಅಲ್ಲಿಂದ ನಂತರದ ಸಿನಿಮಾಗಳಲ್ಲಿ ನಟನೆಯನ್ನು ಸಾಬೀತುಪಡಿಸುತ್ತ ಬಂದೆ. ‘ಲವ್‌ ಇನ್‌ ಮಂಡ್ಯ’, ‘ಅಯೋಗ್ಯ’ ಸಿನಿಮಾಗಳು ಕಮರ್ಷಿಯಲ್‌ ಆಗಿ ದೊಡ್ಡ ಯಶಸ್ಸು ತಂದುಕೊಟ್ಟವು’’ ಎಂದು ಹಳೆಯ ದಿನಗಳನ್ನು ಸತೀಶ್ ನೆನಪಿಸಿಕೊಂಡರು.

‘ರಾಕೆಟ್‌’ ಸಿನಿಮಾದೊಂದಿಗೆ ನಿರ್ಮಾಪಕರಾದ ಸತೀಶ್‌, ಒಂದು ಸ್ಕ್ರಿಪ್ಟ್‌ ಅನ್ನೂ ಸಿದ್ಧಪಡಿಸಿದ್ದಾರೆ. ಒಪ್ಪಿಕೊಂಡಿರುವ ಸಿನಿಮಾಗಳು ಮುಗಿದ ಬಳಿಕ ನಿರ್ದೇಶನ ಮಾಡುವ ಇರಾದೆ ಹೊಂದಿದ್ದಾರೆ. ‘‘ಕಳೆದ 10 ವರ್ಷಗಳು ನನ್ನನ್ನು ಪ್ರೂವ್‌ ಮಾಡಿಕೊಳ್ಳಲು ಮೀಸಲಾಗಿದ್ದವು. ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಇನ್ನೊಂದು ಹಂತ ಮುಂದಕ್ಕೆ ಹೋಗಿ ದೊಡ್ಡ ಬಜೆಟ್‌ನ ಸಿನಿಮಾಗಳನ್ನು ಮಾಡಬೇಕೆಂದುಕೊಂಡಿರುವೆ. ಗುಣಮಟ್ಟದಲ್ಲಿಯೂ ಉತ್ಕೃಷ್ಟವಾಗಿರುವ ಚಿತ್ರಗಳನ್ನು ಎದುರು ನೋಡುತ್ತಿರುವೆ. ‘ಅಶೋಕ ಬ್ಲೇಡ್’ ₹16 ಕೋಟಿ ಬಜೆಟ್‌ನ ಸಿನಿಮಾ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬರುತ್ತಿದೆ. ಇಲ್ಲಿಯತನಕ ಕೈಹಿಡಿದು ನಡೆಸಿರುವ ಜನರ ಪ್ರೀತಿ, ನಂಬಿಕೆ ಉಳಿಸಿಕೊಂಡು, ನಿರ್ಮಾಪಕರಿಗೆ ಹಾಕಿದ ಬಂಡವಾಳ ಮರುಗಳಿಕೆ ಮಾಡಿಕೊಡುವಂತಹ ಸಿನಿಮಾ ಮಾಡುತ್ತೇನೆ. ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ನಲ್ಲಿ ‘ಮ್ಯಾಟ್ನಿ’ ತೆರೆಗೆ ಬರಲಿದೆ’’ ಎನ್ನುತ್ತಾರೆ ಸತೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT