ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನ | ‘ಮಾರಿಗೆ ದಾರಿ’ ಬಿಡಿ!

Published 30 ಮೇ 2024, 23:30 IST
Last Updated 30 ಮೇ 2024, 23:30 IST
ಅಕ್ಷರ ಗಾತ್ರ

‘ಟೋಬಿ’ ಸಿನಿಮಾದ ಟ್ಯಾಗ್‌ಲೈನ್‌ ಇದೀಗ ಸಿನಿಮಾ ಶೀರ್ಷಿಕೆಯಾಗಿದೆ. ಹೊಸಬರ ತಂಡವೊಂದು ‘ಮಾರಿಗೆ ದಾರಿ’ ಎನ್ನುವ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. 

ಅಗಸ್ತ್ಯ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅವರೇ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾಸ್ ಕಂಟೆಂಟ್ ಸಿನಿಮಾ ಎಂದಿದೆ ಚಿತ್ರತಂಡ. ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಅಗಸ್ತ್ಯ ಬರೆದಿದ್ದಾರೆ. ರಾಧಾ ಫಿಲಂಸ್ ಬ್ಯಾನರ್‌ನಡಿ ಚಿತ್ರ ನಿರ್ಮಾಣಗೊಂಡಿದೆ.

ಭಿನ್ನವಾದ ಕಥೆಯೊಂದನ್ನು ಕನ್ನಡದ ಪ್ರೇಕ್ಷಕರ ಎದುರಿಗೆ ತರುತ್ತಿದ್ದೇನೆ ಎಂದಿದ್ದಾರೆ ನಿರ್ದೇಶಕ.

ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಜಗದೀಶ್ ಗೌಡ ಛಾಯಾಚಿತ್ರಗ್ರಹಣ, ಸ್ವಾಮಿನಾಥನ್ ಆರ್.ಕೆ ಸಂಗೀತ ನಿರ್ದೇಶನ, ಜಗದೀಶ್ ಗೌಡ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT