ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಗಸ್ಟ್‌ 30ಕ್ಕೆ ‘ರಾನಿ’ ತೆರೆಗೆ

Published 9 ಜುಲೈ 2024, 23:20 IST
Last Updated 9 ಜುಲೈ 2024, 23:20 IST
ಅಕ್ಷರ ಗಾತ್ರ

ಗುರುತೇಜ್ ಶೆಟ್ಟಿ ನಿರ್ದೇಶನದ, ಕಿರಣ್‌ರಾಜ್ ನಾಯಕನಾಗಿ ನಟಿಸಿರುವ ‘ರಾನಿ’ ಚಿತ್ರ ಆಗಸ್ಟ್‌ 30ರಂದು ತೆರೆಕಾಣಲಿದೆ. 

ಇತ್ತೀಚೆಗಷ್ಟೇ ಕಿರಣ್‌ರಾಜ್‌ ಜನ್ಮದಿನದಂದು ಚಿತ್ರದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಹವಾಮಾನವೆ ಸುಂದರ ಸುಂದರ..’ ಎಂಬ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ‘ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ, ‘ರಾನಿ’ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು. ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ‌. ಬಿಗ್‌ಬಜೆಟ್‌ ಸಿನಿಮಾವಿದು’ ಎಂದರು ಕಿರಣ್‌ರಾಜ್‌. 

‘ಇದು ಆ್ಯಕ್ಷನ್‍ ಚಿತ್ರವಾದರೂ, ಪಕ್ಕಾ ಕೌಟುಂಬಿಕ ಚಿತ್ರ. ಭಿನ್ನ ಪಾತ್ರದಲ್ಲಿ ಕಿರಣ್‌ರಾಜ್‌ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಆರು ಆ್ಯಕ್ಷನ್ ಸನ್ನಿವೇಶಗಳಿದೆ. ವಿನೋದ್‍ ಮಾಸ್ಟರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಆಗಸ್ಟ್ 30ಕ್ಕೆ ಸಿನಿಮಾ ತೆರೆಗೆ ಬರಲಿದೆ’ ಎಂದು ಗುರುತೇಜ್ ಶೆಟ್ಟಿ ತಿಳಿಸಿದರು. ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ರಾಧ್ಯ, ಸಮಿಕ್ಷಾ ಮತ್ತು ಅಪೂರ್ವ ಬಣ್ಣಹಚ್ಚಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT