ಸೋಮವಾರ, ಏಪ್ರಿಲ್ 19, 2021
33 °C

'ಯುವರತ್ನ' ನೋಡಲು ನೂಕು ನುಗ್ಗಲು: ಪೊಲೀಸರಿಂದ ಲಘು ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನಟ ಪುನೀತ್ ರಾಜಕುಮಾರ ಅಭಿನಯದ 'ಯುವರತ್ನ' ಚಿತ್ರಕ್ಕೆ ನಗರದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ.

ನಗರದ ನಾಲ್ಕೂ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಂಡಿದ್ದು ವಿಶೇಷ. ಬೆಳಗಿನ ಜಾವ 5 ಗಂಟೆಗೆ ಮೀರ್ ಆಲಂ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಸಮಯ ನಿಗದಿಗೊಂಡಿತು.

 ಬಾಲಾ ಚಿತ್ರಮಂದಿರದಲ್ಲಿ ಆರು ಗಂಟೆಗೆ, ಸರಸ್ವತಿ ಮತ್ತು ಲಕ್ಷ್ಮಿ ಚಿತ್ರಮಂದಿರದಲ್ಲಿ ಏಳು ಗಂಟೆಗೆ ಮೊದಲ ಷೋ ಪ್ರದರ್ಶನ ಕಂಡಿತು.

ಚಿತ್ರ ವೀಕ್ಷಣೆಗೆ ಪುನೀತ್ ಅವರ ಅಭಿಮಾನಿಗಳು ತಡರಾತ್ರಿ 1 ಗಂಟೆಯಿಂದಲೇ ಚಿತ್ರಮಂದಿರದ ಎದುರು ಜಮಾಯಿಸಿದ್ದರು. ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ, ಪುನೀತ್ ಕಟೌಟ್ ಗೆ ಮಾಲೆ ಹಾಕಿ ಜಯಘೋಷ ಹಾಕಿ ಅಲ್ಲಿಯೇ ಕಾದು ಕುಳಿತರು. ಐದು ಗಂಟೆಗೆ ಜನದಟ್ಟಣೆ ಹೆಚ್ಚಾಯಿತು. ಬಾಲಾ ಚಿತ್ರಮಂದಿರದ ಗೇಟ್ ತೆರೆಯುತ್ತಿದ್ದಂತೆ ಎಲ್ಲರೂ ಟಿಕೆಟ್ ಕೌಂಟರ್ ನಲ್ಲಿ ಮುಗಿಬಿದ್ದದ್ದರಿಂದ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಪುನೀತ್ ಅವರ ಕೆಲ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಬಂದಿದ್ದ ಜನರಿಗೆ ಉಪಾಹಾರ ವಿತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು