ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಭಾಷೆಗಳಲ್ಲಿ ತೆರೆಕಾಣಲಿದೆ ಪ್ರಿಯಾಂಕ ಉಪೇಂದ್ರ ಅಭಿನಯದ 'ಡಿಟೆಕ್ಟಿವ್‌ ತೀಕ್ಷ್ಣ'

Last Updated 5 ಮೇ 2022, 8:58 IST
ಅಕ್ಷರ ಗಾತ್ರ

ಪೊಲೀಸ್‌ ಪೇದೆ, ಖಡಕ್‌ ಪೊಲೀಸ್‌ ಅಧಿಕಾರಿ ಹೀಗೆ ಹಲವು ಪಾತ್ರಗಳಿಗೆ ಬಣ್ಣಹಚ್ಚಿ ಸಾಲು ಸಾಲು ಆ್ಯಕ್ಷನ್‌ ಚಿತ್ರಗಳಲ್ಲಿತೆರೆಯ ಮೇಲೆ ಮಿಂಚಿದ್ದ ನಟಿ ಪ್ರಿಯಾಂಕ ಉಪೇಂದ್ರ ಅವರ 50ನೇ ಸಿನಿಮಾಶೀಘ್ರದಲ್ಲೇ ಸೆಟ್ಟೇರಲಿದೆ.

‘ಡಿಟೆಕ್ಟಿವ್‌ ತೀಕ್ಷ್ಣ’ ಪ್ರಿಯಾಂಕ ಅವರ 50ನೇ ಸಿನಿಮಾವಷ್ಟೇ ಅಲ್ಲ, ಬದಲಾಗಿ ಇದೊಂದು ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ಎನ್ನುವುದು ವಿಶೇಷ. ಜೂನ್‌ನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಸಿನಿಮಾವು ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ತೆರೆಕಾಣಲಿದೆ.ತ್ರಿವಿಕ್ರಮ ರಘು ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಪ್ರಿಯಾಂಕ ಅವರು ಡಿಟೆಕ್ಟಿವ್‌ ತೀಕ್ಷ್ಣ ಎಂಬ ಪಾತ್ರವನ್ನು ಮಾಡಲಿದ್ದಾರೆ. ರಘು ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪುತ್ತೂರಿನ ಪುರುಷೋತ್ತಮ.ಬಿ. ಕೊಯೂರು ಬಂಡವಾಳ ಹೂಡುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ಕಲಾವಿದರೊಬ್ಬರು ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದಷ್ಟೇ ಚಿತ್ರತಂಡವು ಮಾಹಿತಿ ನೀಡಿದೆ. ಎರಡು ಭಾಗಗಳಲ್ಲಿ ಚಿತ್ರವು ತೆರೆಕಾಣಲಿದ್ದು, ಬಹುಭಾಷಾ ನಟರು ತಾರಾಬಳಗದಲ್ಲಿ ಇರಲಿದ್ದಾರೆ.ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ಗೋವಾ ಹೀಗೆ ಹಲವೆಡೆ 120 ದಿನ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧರಿಸಿದ್ದು, ಇದೇ 12ರಂದು ಅದ್ಧೂರಿಯಾಗಿ ಮೋಷನ್ ಪೋಸ್ಟರ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ನಿಗದಿಪಡಿಸಿದೆ.ಮನುದಾಸಪ್ಪ ಛಾಯಾಗ್ರಹಣ, ವಿನೋದ್- ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT