ಇಂದು(ಜುಲೈ 29) ಬಾಲಿವುಡ್ ನಟ ಸಂಜಯ್ ದತ್ ಅವರ ಜನ್ಮದಿನ. ಇದೇ ಸಂದರ್ಭದಲ್ಲಿ ‘ಕೆಜಿಎಫ್’ ಚಿತ್ರತಂಡವು ಖಡಕ್ ಆಗಿರುವ ಪೋಸ್ಟರ್ ಮುಖಾಂತರ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ.

ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕಿರಗಂದೂರು ನಿರ್ಮಾಣದ, ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ‘ಅಧೀರ’ನ ಪಾತ್ರಕ್ಕೆ ಸಂಜಯ್ ದತ್ ಬಣ್ಣಹಚ್ಚಿದ್ದಾರೆ. ಈ ಹಿಂದೆಯೇ ‘ಅಧೀರ’ನ ಫಸ್ಟ್ಲುಕ್ ಬಿಡುಗಡೆಯಾಗಿತ್ತು. ಇದೀಗ ಹೊಸ ಪೋಸ್ಟರ್ನಲ್ಲಿ ‘ಅಧೀರ’ ಯುದ್ಧಕ್ಕೆ ಸಜ್ಜಾಗಿ ನಿಂತಿರುವಂತಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಪ್ರಶಾಂತ್ ನೀಲ್, ‘ಯುದ್ಧ ಇರುವುದು ಪ್ರಗತಿಗಾಗಿ. ರಣಹದ್ದುಗಳೂ ನನ್ನ ಈ ಮಾತನ್ನು ಒಪ್ಪಿಕೊಳ್ಳುತ್ತವೆ–ಅಧೀರ’ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರದಲ್ಲಿ ಬಹುಮುಖ್ಯವಾದ ‘ರಮಿಕಾ ಸೇನ್’ ಪಾತ್ರದಲ್ಲಿ ರವಿನಾ ಟಂಡನ್, ನಾಯಕಿಯಾಗಿ ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ಬಿ.ಸುರೇಶ್, ಯಶ್ ಶೆಟ್ಟಿ, ಅರ್ಚನಾ ಜೋಯಿಷ್, ಅಯ್ಯಪ್ಪ ಪಿ.ಶರ್ಮ ಇನ್ನಿತರರು ಕಾಣಿಸಿಕೊಂಡಿದ್ದಾರೆ. ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಹೇರಲಾಗಿದ್ದ ಲಾಕ್ಡೌನ್ ಕಾರಣದಿಂದಾಗಿ ಚಿತ್ರಗಳ ಬಿಡುಗಡೆಗೆ ಅಡ್ಡಿಯಾಗಿತ್ತು. ಈಗಾಗಲೇ ಕೆಜಿಎಫ್–2 ಚಿತ್ರೀಕರಣ ಪೂರ್ಣಗೊಂಡಿದ್ದು, ಜುಲೈನಲ್ಲೇ ಚಿತ್ರಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ‘ಸಿನಿಮಾ ಹಾಲ್ ಗ್ಯಾಂಗ್ಸ್ಟರ್ಗಳಿಂದ ತುಂಬಿಕೊಂಡಾಗಲಷ್ಟೇ ಮಾನ್ಸ್ಟರ್ ಬರುತ್ತಾನೆ. ಆತ ತೆರೆಯ ಮೇಲೆ ಬರುವ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಿದ್ದೇವೆ’ ಎಂದು ಪ್ರಶಾಂತ್ ಇತ್ತೀಚೆಗೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.