ಬೆಂಗಳೂರು: ಕಳೆದೊಂದು ವಾರದಿಂದ ತಮ್ಮ ಮೇಲೆ ಬಂದಿರುವ ಎರಡು ಆರೋಪಗಳಿಗೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ಸುದೀರ್ಘ ವಿವರಣೆ ನೀಡಿದ್ದಾರೆ.

'ಸಂಜು ವೆಡ್ಸ್ ಗೀತಾ-2' ಚಿತ್ರಕ್ಕೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ರಚಿತಾ ರಾಮ್ ಮಾತನಾಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.

'ಸಂಜು ವೆಡ್ಸ್ ಗೀತಾ-2 ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ನಟ ಇತ್ತಿಚಿಗೆ ಮಾಧ್ಯಮಗಳ ಮುಂದೆ ಒಂದಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ಬಳಕೆ ಮಾಡಿರುವ ಪದಗಳು, ಹೇಳಿಕೆಗಳಿಂದ ತುಂಬಾನೇ ಆಘಾತವಾಗಿದೆ. ನನಗೆ ತುಂಬಾನೇ ಬೇಜಾರಾಗಿದೆ. ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.

'ನನ್ನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಅದೇ ತಂಡ ಈಗ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದೆ. ನನ್ನ ಉಪಸ್ಥಿತಿಯಲ್ಲೇ ಈ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಬೇಕಿತ್ತು. ಯಾಕೆ ಹೇಳಿಲ್ಲ? ಆವಾಗ ಯಾಕೆ ಹೊಗಳಿದ್ರು? ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ? ಇಲ್ಲಿ ಸುಳ್ಳು ಹೇಳುತ್ತಿರುವವರು ಯಾರು' ಎಂದು ಪ್ರಶ್ನಿಸಿದ್ದಾರೆ.

'ಇದೇ ಸಮಯದಲ್ಲಿ ಇನ್ನೊಂದು ಸಿನಿಮಾದ ಪ್ರಚಾರಕ್ಕಾಗಿ ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋಗಲು ನನಗೆ ಅನುಮತಿ ನೀಡಿರಲಿಲ್ಲ. ಅವರೇ ಇಂದು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ಸಿನಿಮಾಗೆ ಮಾಡಬೇಕಿರುವ ಎಲ್ಲವನ್ನೂ ಮಾಡಿದ್ದೇನೆ' ಎಂದು ಹೇಳಿದ್ದಾರೆ.

'ಇಂದು ನಾನು ಬೇರೆ ಸಿನಿಮಾದೊಂದಿಗೆ ಬದ್ಧವಾಗಿದ್ದೇನೆ. ನಾನು ಡೇಟ್ಸ್ ಕೊಟ್ಟಿದ್ದೇನೆ. ನನ್ನ ನಿರ್ದೇಶಕರೊಂದಿಗೆ ಬದ್ಧವಾಗಿದ್ದೇನೆ. ಈವಾಗ ನೀವು ಹೇಳಿ ನಾನು ತಪ್ಪು ಮಾಡಿದ್ದೇನಾ' ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.

'ನನಗೆ ನಾನು ತಪ್ಪು ಮಾಡಿದ್ದೇನೆ ಅಂತಾ ಅನಿಸ್ತಿಲ್ಲ. ನಾನು ಸರಿಯಾಗಿ ಎಲ್ಲ ಪ್ರಚಾರ ಕಾರ್ಯದಲ್ಲೂ ಭಾಗವಹಿಸಿದ್ದೇನೆ. ರಿ ರಿಲೀಸ್ ಸಮಯದಲ್ಲಿ ನನಗೆ ನನ್ನ ಸಿನಿಮಾದ ಮೇಲೆ ಬದ್ಧತೆಯಿತ್ತು. ಕೊನೆಯ ಕ್ಷಣದಲ್ಲಿ ಪ್ರಚಾರ ಮುಂದೂಡಿದರೆ ಇವೆಲ್ಲಕ್ಕೂ ನಾನು ಏನು ಹೇಳಬೇಕೆಂದು ಗೊತ್ತಿಲ್ಲ' ಎಂದು ತಿಳಿಸಿದ್ದಾರೆ.

'ಸಿನಿಮಾ ದುಡ್ಡು ತಗೊಂಡು ಡೇಟ್ಸ್ ಕೊಟ್ಟಿಲ್ಲ ಎಂಬ ತನ್ನ ಮೇಲಿನ ಎರಡನೇ ಆರೋಪದ ಬಗ್ಗೆಯೂ ರಚಿತಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಷಯದ ಬಗ್ಗೆ ನಾನು ಮಾತನಾಡುವ ಹಾಗಿಲ್ಲ. ಸಾರಾ ಗೋವಿಂದು ಸರ್ ಈ ವಿಷಯವನ್ನು ಹ್ಯಾಂಡಲ್ ಮಾಡ್ತಿದ್ದಾರೆ. ಸಿನಿಮಾ ಚೇಂಬರ್ಗೂ ಈ ವಿಷಯ ಹೋಗಿದೆ' ಎಂದು ತಿಳಿಸಿದ್ದಾರೆ.

'ನಾನು ತಪ್ಪು ಮಾಡಿದ್ರೆ ಚಿಕ್ಕ ಮಕ್ಕಳ ಕಾಲಿಗೂ ಬೀಳುವಳು ನಾನು. ಆದರೆ ತಪ್ಪು ಮಾಡದಿದ್ರೆ ದೇವರೇ ಬಂದು ಮುಂದೆ ನಿಂತರೂ ಕ್ಷಮೆ ಕೇಳಲ್ಲ' ಎಂದು ಹೇಳಿದ್ದಾರೆ.

'ಅಭಿಮಾನಿಗಳಿಗೆ ಏನಾದ್ರೂ ನೋವು ಆಗಿದ್ರೆ ನನ್ನ ಕ್ಷಮೆ ನಿಮಗೆ ಇರಲಿ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.