‘ದಂಗಲ್‌’ನ ಸ್ಟ್ರಾಂಗ್‌ ಲೇಡಿ ಸಾನ್ಯಾ ಮಲ್ಹೋತ್ರಾ ಕನಸೊಂದು ನನಸಾಗಿದೆ!

7

‘ದಂಗಲ್‌’ನ ಸ್ಟ್ರಾಂಗ್‌ ಲೇಡಿ ಸಾನ್ಯಾ ಮಲ್ಹೋತ್ರಾ ಕನಸೊಂದು ನನಸಾಗಿದೆ!

Published:
Updated:
Prajavani

‘ದಂಗಲ್‌’ನ ಸ್ಟ್ರಾಂಗ್‌ ಲೇಡಿ ಸಾನ್ಯಾ ಮಲ್ಹೋತ್ರಾ ‘ಬಧಾಯಿ ಹೋ’ ಯಶಸ್ಸಿನ ನಂತರ ತಮ್ಮಿಷ್ಟದ ನಟ ನವಾಜುದ್ದೀನ್‌ ಸಿದ್ದಿಕಿ ಜೊತೆ ನಟಿಸುತ್ತಿದ್ದಾರೆ.

ರಿತೇಶ್‌ ಬಾತ್ರಾ ನಿರ್ದೇಶನದ ‘ಫೋಟೊಗ್ರಾಫ್‌’ ಸಿನಿಮಾದಲ್ಲಿ ಸಾನ್ಯಾ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಪಂಜಾಬಿನಲ್ಲಿ ಹುಟ್ಟಿ ದೆಹಲಿಯಲ್ಲಿ ಬೆಳೆದ ಸಾನ್ಯಾ, ಗುಜರಾತಿ ಯುವತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಇದೇ ಮೊದಲ ಬಾರಿಗೆ ಮುಂಬೈಕರ್‌ ಪೋಷಾಕಿನಲ್ಲಿ ಕಾಣಿಸಿಕೊಳ್ಳುತ್ತಿರುವ ಖುಷಿಯಲ್ಲಿದ್ದಾರೆ ಸಾನ್ಯಾ.

‘ಬಧಾಯಿ ಹೋ’ದಲ್ಲಿನ ಪಾತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ರೋಮಾಂಚಿತ ಸಾನ್ಯಾ ಮತ್ತೆ ಅಂಥದೇ ಖುಷಿಯ ಉತ್ತುಂಗದಲ್ಲಿದ್ದಾರೆ ಈ ಪಂಜಾಬಿ ಬೆಡಗಿ.

ನವಾಜುದ್ದೀನ್‌ ಸಿದ್ದಿಕಿ ಅವರದು ಸ್ಟ್ರೀಟ್‌ ಫೋಟೊಗ್ರಾಫರ್‌ ರಫಿ ಎಂಬ ಪಾತ್ರ. ಮದುವೆಯಾಗುವಂತೆ ಅಜ್ಜಿ ಪೀಡಿಸುವುದನ್ನು ತಪ್ಪಿಸಲು ತನ್ನ  ಪ್ರೇಮಿಯ ಹಾಗೆ ನಟಿಸುವಂತೆ ನಾಯಕಿ ಮಿಲೋನಿಯನ್‌ಳನ್ನು ಸಜ್ಜುಗೊಳಿಸುತ್ತಾನೆ ಆ ಫೋಟೊಗ್ರಾಫರ್‌. ಅವರಿಬ್ಬರೂ ನಿಜವಾದ ಪ್ರೇಮಬಂಧನಕ್ಕೊಳಗಾಗುತ್ತಾರೆ.

ಸಾನ್ಯಾಗೆ ಒಂದರ ಮೇಲೊಂದು ಅವಕಾಶಗಳು ಬರುತ್ತಲೇ ಇವೆ. ಅನುರಾಗ್‌ ಕಶ್ಯಪ್‌ ನಿರ್ದೇಶನದ ಹಾಸ್ಯ ವಸ್ತುವುಳ್ಳ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಮತ್ತು ರಾಜ್‌ಕುಮಾರ್‌ ರಾವ್‌ ಅವರೊಂದಿಗೂ ನಟಿಸಲಿದ್ದಾಳೆ. ಈ ಚಿತ್ರದಲ್ಲಿ ‘ದಂಗಲ್‌’ನ ಸಹನಟಿ ಫಾತಿಮಾ ಸನಾ ಶೇಖ್‌ ಕೂಡಾ ಇದ್ದಾರೆ.

ಸಾನ್ಯಾ ಸೂಪರ್‌ ಡಾನ್ಸರ್‌ ಎಂಬುದನ್ನು ಈಗಾಗಲೆ ಸಾಬೀತು ಮಾಡಿದ್ದಾರೆ. ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್‌ ಕೂಡಾ ಈ ಬೆಡಗಿಯ ನೃತ್ಯಕ್ಕೆ ಮನಸೋತಿದ್ದಾರೆ. ‘ಭಾರತ್‌’ ಚಿತ್ರದಲ್ಲಿ ಸಾನ್ಯಾ ಕೊರಿಯೊಗ್ರಾಫರ್‌. ಡಾನ್ಸ್‌ ವಿಡಿಯೊಗಳನ್ನು ಸಾಮಾಜಿಕ ಜಾಲತಾಣ ಮತ್ತು ಯೂ ಟ್ಯೂಬ್‌ಗೆ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ. ಸಾನ್ಯಾ ಬಾಲ್ಯದಿಂದಲೇ ಬ್ಯಾಲೆ ನೃತ್ಯವನ್ನು ಕರಗತ ಮಾಡಿಕೊಂಡವರು. 

ನಟನೆಯಲ್ಲಿ ಪ್ರಬುದ್ಧತೆ ಇರಬೇಕು ಎಂಬುದು ಸಾನ್ಯಾ ಕಾಳಜಿ. ‘ದಂಗಲ್‌’ ಚಿತ್ರಕ್ಕೆ ಕಾಲ್‌ಶೀಟ್‌ ಕೊಟ್ಟ ತಕ್ಷಣ ಆಕೆ ಕುಸ್ತಿಯ ಪಟ್ಟುಗಳನ್ನು ನೋಡಿ, ಮಾಡಿ ಕಲಿತು ಕ್ಯಾಮೆರಾ ಎದುರಿಸಿದ್ದೇ ಇದಕ್ಕೆ ಸಾಕ್ಷಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !