ಶನಿವಾರ, ಏಪ್ರಿಲ್ 1, 2023
29 °C

ಕೇದಾರನಾಥ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಸಾರಾ ಅಲಿಖಾನ್‌, ಜಾಹ್ನವಿ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್ ಸ್ಟಾರ್ ಪುತ್ರಿಯರಾದ ಜಾಹ್ನವಿ ಕಪೂರ್ ಮತ್ತು ಸಾರಾ ಅಲಿಖಾನ್ ಅವರು ಕೇದಾರನಾಥ ಯಾತ್ರಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸಾರಾ ಅಲಿಖಾನ್‌ ಅವರು ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲವರು ಕೊಂಕು ತೆಗೆದಿದ್ದು ಮುಸ್ಲಿಮರಿಗೆ ದೇವರು ಇರುವುದು ಒಂದೇ ಅಲ್ಲವೇ? ಎಂದು ಟ್ರೋಲ್‌ ಮಾಡುತ್ತಿದ್ದಾರೆ.

ಕೆಲವರು ಅವರ ಉಡುಪು ಮತ್ತು ಮೇಕಪ್‌ ಬಗ್ಗೆಯೂ ಕಮೆಂಟ್‌ಗಳನ್ನು ಮಾಡಿದ್ದಾರೆ. ನೀವು ಮೇಕಪ್‌ ಇಲ್ಲದಿದ್ದರೆ ಸುಂದರವಾಗಿ ಕಾಣುವುದಿಲ್ಲ ಎಂದಿದ್ದಾರೆ. 

ಯಾವುದೇ ಕಮೆಂಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಸಾರಾ ಅಲಿಖಾನ್‌ ’ನನಗೆ ದೇವರ ಕೃಪೆ’ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.

ಕಳದೆ ತಿಂಗಳು ಜಾಹ್ನವಿ ಹಾಗೂ ಸಾರಾ ಅಲಿಖಾನ್‌ ರಾಜಸ್ಥಾನ ಹಾಗೂ ಕಾಶ್ಮೀರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದರು. ಆಗಲೂ ನೆಟ್ಟಿಗರು ಸಾರಾ ಅವರನ್ನು ಟ್ರೋಲ್‌ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು