ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ಪ್ರಕರಣ: ಎನ್‌ಸಿಬಿ ತನಿಖೆಯಲ್ಲಿ ಕೇಳಿಬಂತು ಸಾರಾ, ಸಿಮೋನ್, ರಕುಲ್ ಹೆಸರು

Last Updated 14 ಸೆಪ್ಟೆಂಬರ್ 2020, 15:41 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಸುತ್ತ ಡ್ರಗ್ಸ್ ಜಾಲದ ನಂಟಿರುವ ಕುರಿತು ತನಿಖೆ ನಡೆಸುತ್ತಿರುವಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್,ಸಿಮೋನ್ ಖಂಬಟ್ಟಾ ಅವರ ಹೆಸರನ್ನು ಹೇಳಿದೆ.

ತನಿಖೆಯ ವೇಳೆ ಸಾರಾ, ಸಿಮೋನ್ ಮತ್ತು ರಕುಲ್ ಅವರ ಹೆಸರು ಕೇಳಿ ಬಂದಿದೆ ಎಂದು ಹೇಳಲಾಗಿತ್ತು. ಅದು ಹೌದಾ? ಎಂದು ಕೇಳಿದಾಗ ಹೌದು ಎಂದು ಎನ್‌ಸಿಬಿ ಉಪ ನಿರ್ದೇಶಕ (ಕಾರ್ಯಾಚರಣೆ) ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ. ಅದೇ ವೇಳೆ ಎನ್‌ಸಿಬಿ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ ಸಿದ್ಧಪಡಿಸಿದೆಯೇ ಎಂದು ಕೇಳಿದಾಗ ಇಲ್ಲ ಎಂದು ಅವರು ಉತ್ತರಿಸಿದ್ದಾರೆ.

ಆದಾಗ್ಯೂ, ತನಿಖೆಯ ಯಾವ ಅಂಶದಲ್ಲಿ ಈ ಸೆಲೆಬ್ರಿಟಿಗಳ ಹೆಸರು ಕೇಳಿಬಂತು ಎಂಬುದನ್ನು ಎನ್‌ಸಿಬಿ ಸ್ಪಷ್ಟಪಡಿಸಿಲ್ಲ.

ಸುಶಾಂತ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌಮಿಕ್ ಚಕ್ರವರ್ತಿಯವನ್ನು ಎನ್‌ಸಿಬಿ ಬಂಧಿಸಿದ್ದು ತನಿಖೆ ನಡೆಸುತ್ತಿದೆ.

ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಪುತ್ರಿಯಾಗಿರುವ ಸಾರಾ ಅಲಿಖಾನ್ ಬಾಲಿವುಡ್‌ನಲ್ಲಿ ಬೇಡಿಕೆಯಿರುವ ಯುವ ನಟಿ ಆಗಿದ್ದಾರೆ. ರಕುಲ್ ಪ್ರೀತ್ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಹುಭಾಷಾ ನಟಿ. ಸಿಮೋನ್ ಫ್ಯಾಷನ್ ಡಿಸೈನರ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.

ಸುಶಾಂತ್ ಮತ್ತು ಸಾರಾ 2018ರಲ್ಲಿ ಕೇದಾರ್‌ನಾಥ್ ಸಿನಿಮಾದಲ್ಲಿ ನಟಿಸಿದ್ದರು. ಕೇದಾರ್‌ನಾಥ್ ಸಿನಿಮಾ ಯಶಸ್ವಿ ಆದ ನಂತರ ಇವರಿಬ್ಬರೂ ಬ್ಯಾಂಕಾಕ್‌ಗೆ ಪ್ರಯಾಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT