ಮುಂಬೈ: ಗಾಯಕ ಮತ್ತು ‘ಸರ್ದಾರ್ ಜಿ 3’ ಚಿತ್ರದ ನಾಯಕ ನಟ ದಿಲ್ಜಿತ್ ದೋಸಾಂಜ್ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಹಿರಿಯ ನಟ ನಾಸೀರುದ್ದೀನ್ ಶಾ, ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ.

ಪಾಕಿಸ್ತಾನ ನಟಿ ಹನಿಯಾ ಅಮೀರ್ ಅವರಿಗೆ ಅವಕಾಶ ನೀಡಿರುವುದಕ್ಕೆ ‘ಸರ್ದಾರ್ ಜಿ 3’ ಚಿತ್ರವನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿಬಂದಿದೆ. ಅಲ್ಲದೇ ಹನಿಯಾ ಅವರೊಂದಿಗೆ ತೆರೆ ಹಂಚಿಕೊಂಡಿರುವುದಕ್ಕೆ ದಿಲ್ಜಿತ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ಈ ನಡುವೆ, ದಿಲ್ಜಿತ್ ವಿರುದ್ಧದ ಟೀಕೆಗಳನ್ನು ಖಂಡಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನಾಸಿರುದ್ದೀನ್ ಅವರು, ಚಿತ್ರದ ಪಾತ್ರಗಳ ಆಯ್ಕೆಯಲ್ಲಿ ದಿಲ್ಜಿತ್ ಭಾಗಿಯಾಗಿಲ್ಲ ಎಂದು ಹೇಳಿದ್ದರು.

‘ದಿಲ್ಜಿತ್ ಪರ ನಾನು ಧೃಡವಾಗಿ ನಿಲ್ಲುತ್ತೇನೆ. ಜುಮ್ಲಾ ಪಕ್ಷದ ಕೊಳಕು ತಂತ್ರಗಳ ವಿಭಾಗವು ದಿಲ್ಜಿತ್ ಮೇಲೆ ದಾಳಿ ಮಾಡುವ ಅವಕಾಶಕ್ಕಾಗಿ ಕಾಯುತ್ತಿತ್ತು. ಕೊನೆಗೂ ಅದು ಅವರಿಗೆ ಸಿಕ್ಕಿದೆ. ಚಿತ್ರದ ಪಾತ್ರವರ್ಗವನ್ನು ಆಯ್ಕೆ ಮಾಡುವ ಜವಾಬ್ದಾರಿಯು ಚಿತ್ರದ ನಿರ್ದೇಶಕರದ್ದಾಗಿರುತ್ತದೆ ವಿನಃ ದಿಲ್ಜಿತ್ ಅವರದ್ದಲ್ಲ’ ಎಂದು ಹೇಳಿದ್ದರು.

‘ಭಾರತ ಮತ್ತು ಪಾಕಿಸ್ತಾನದ ಜನರ ನಡುವೆ ಸಂವಹನವನ್ನು ಕೊನೆಗೊಳಿಸಬೇಕೆಂದು ಈ ಗೂಂಡಾಗಳು ಬಯಸುತ್ತಿವೆ. ಪಾಕಿಸ್ತಾನದಲ್ಲಿ ನನಗೆ ಸಂಬಂಧಿಕರು, ಆತ್ಮೀಯ ಸ್ನೇಹಿತರಿದ್ದಾರೆ. ನಾನು ಅವರನ್ನು ಭೇಟಿ ಮಾಡುವುದನ್ನು ಅಥವಾ ಪ್ರೀತಿಯಿಂದ ಮಾತನಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ನಾಸೀರುದ್ದೀನ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ನಾಸೀರುದ್ದೀನ್ ಅವರ ವಿರುದ್ಧ ಕಿಡಿಕಾರಿದ್ದಾರೆ. ತೀವ್ರ ವಿರೋಧ ವ್ಯಕ್ತವಾಗುತ್ತಲೇ ಪೋಸ್ಟ್ ಅಳಿಸಿ ಹಾಕಿದ್ದಾರೆ.

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಹನಿಯಾ ಅಮೀರ್ ಸೇರಿದಂತೆ ಪಾಕಿಸ್ತಾನ ಹಲವು ನಟ–ನಟಿಯರು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.