ಶನಿವಾರ, ಸೆಪ್ಟೆಂಬರ್ 18, 2021
28 °C

ನಟ ಸುಶಾಂತ್ ಬಗ್ಗೆ ಸರೋಜ್ ಖಾನ್ ಬರೆದಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Saroj Khan

ಬೆಂಗಳೂರು:  ಸರೋಜ್ ಖಾನ್ ಅವರು, ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟ ಸುಶಾಂತ್‌ಸಿಂಗ್ ರಜಪೂತ್‌ ಕುರಿತು (ಜೂನ್ 14ರಂದು) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಸುಂದರವಾದ ಬರಹವನ್ನು ಪೋಸ್ಟ್‌ ಮಾಡಿದ್ದರು. ಅದು ಅವರ ಕೊನೆಯ ಪೋಸ್ಟ್‌ ಕೂಡ ಹೌದು.

ಭಾವನಾತ್ಮಕವಾಗಿ ಬರೆದ ಆ ಪೋಸ್ಟ್‌ನ ಸಾರಾಂಶ ಹೀಗಿದೆ:

‘ನಾನೆಂದೂ ನಿನ್ನೊಂದಿಗೆ ಕೆಲಸ ಮಾಡಲಿಲ್ಲ, ಆದರೆ, ನಾವಿಬ್ಬರೂ ಸಾಕಷ್ಟು ಬಾರಿ ಭೇಟಿಯಾಗಿದ್ದೇವೆ. ಜೀವನದಲ್ಲಿ ನಿನಗೆ ಏನು ಅಂತ ತೊಂದರೆಯಾಗಿತ್ತು ? ನೀನು ತೆಗೆದುಕೊಂಡಿರುವ ಇಂಥ ಕಠಿಣ ನಿರ್ಧಾರದಿಂದ ನನಗೆ ತುಂಬಾ ಶಾಕ್‌ ಆಗಿದೆ.
ನಿನಗೆ ಸಮಸ್ಯೆಗಳಿದ್ದರೆ, ಅದನ್ನು ಹಿರಿಯರೊಂದಿಗೆ ಹಂಚಿಕೊಳ್ಳಬೇಕಿತ್ತು. ಅವರು ಬಹುಶಃ ನಿನಗೆ ಸಹಾಯ ಮಾಡುತ್ತಿದ್ದರು. ನಿನ್ನನ್ನು ಸಂತೋಷವಾಗಿಡುತ್ತಿದ್ದರು.

ನಿನ್ನ ಆತ್ಮಕ್ಕೆ ದೇವರ ಶಾಂತಿ ಕರುಣಿಸಲಿ. ನಿನ್ನ ಅಗಲಿಕೆಯಿಂದ, ನಿನ್ನ ತಂದೆ ಮತ್ತು ಸಹೋದರಿ ಹೇಗೆ ಸಂಕಟಪಡುತ್ತಿದ್ದಾರೋ ಗೊತ್ತಿಲ್ಲ. ಈ ಸಮಯದಲ್ಲಿ ಅವರಿಗೂ ನಿನ್ನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ. ನಾನು ನಿನ್ನ ಎಲ್ಲ ಸಿನಿಮಾಗಳನ್ನು ಇಷ್ಟಪಟ್ಟಿದ್ದೇನೆ. ನಿನ್ನನ್ನು ಸದಾ ಪ್ರೀತಿಸುತ್ತೇನೆ...'

ಕೊನೆಯ ಕೊರಿಯೊಗ್ರಫಿ

ಸರೋಜ್ ಖಾನ್ ಅವರು ಕೊನೆಯದಾಗಿ ಕೊರಿಯೊಗ್ರಫಿ ಮಾಡಿದ್ದು ಕರಣ್ ಜೋಹರ್ ಅವರ ‘ಕಳಂಕ್‌‘ ಸಿನಿಮಾಕ್ಕೆ. ಅದು 2019ರಲ್ಲಿ. ಅದಕ್ಕೂ ಮುನ್ನ ಮಾಧುರಿ ದೀಕ್ಷಿತ್ ಅವರ ಇತ್ತೀಚೆಗಿನ ‘ತಾಬಾಹ್‌ ಹೋ ಗಯೆ‘ ಸಿನಿಮಾದ  ಹಾಡಿಗೆ ಕೊರಿಯೊಗ್ರಫಿ ಮಾಡಿದ್ದರು.

ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು