ಭಾನುವಾರ, ಜೂನ್ 26, 2022
26 °C

ಸಲ್ಮಾನ್‌ ಖಾನ್‌ ಕುಟುಂಬದಲ್ಲಿ ಏನಾಗ್ತಿದೆ? ಸೊಹೈಲ್‌, ಸೀಮಾ ವಿಚ್ಛೇದನಕ್ಕೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ. ಸಲ್ಲು ಸಹೋದರ ಸೊಹೈಲ್‌ ಖಾನ್‌ ಮತ್ತು ಸೀಮಾ ಖಾನ್‌ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ. 

ಸೊಹೈಲ್‌ ಖಾನ್‌ ಹಾಗೂ ಸೀಮಾ ಖಾನ್‌ ಕಳೆದ ವಾರ ಮುಂಬೈನ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸಲ್ಮಾನ್‌ ಖಾನ್‌ ಕುಟುಂಬದ ಆಪ್ತರು ಖಚಿತವಾಗಿ ಹೇಳಿದ್ದಾರೆ ಎಂದು ಬಾಲಿವುಡ್‌ ಮೂಲಗಳು ತಿಳಿಸಿವೆ.

ಈ ವಿಚ್ಛೇದನಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸೊಹೈಲ್‌ ಮತ್ತು ಸೀಮಾ ವಿಚ್ಚೇದನ ಪಡೆಯುವುದು ಬಹುತೇಕ ಖಚಿತವಾಗಿದೆ. ಇತ್ತ ಸೀಮಾ ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ‘ಖಾನ್‌‘ ಹೆಸರನ್ನು ತೆಗೆದುಹಾಕಿದ್ದಾರೆ. ಈಗ ಅವರು ತಮ್ಮ ಹೆಸರನ್ನು ‘ಸೀಮಾ ಕಿರಣ್‌ ಸಚ್ದೆ‘ ಎಂದು ಬದಲಿಸಿಕೊಂಡಿದ್ದಾರೆ.

ಸೀಮಾ ಇನ್‌ಸ್ಟಾದಲ್ಲಿ ಹೆಸರು ಬದಲಿಸಿ ಕೊಂಡಿರುವುದನ್ನು ಗಮನಿಸಿರುವ ಅಭಿಮಾನಿಗಳು, ಸೀಮಾ ವಿಚ್ಛೇದನ ಪಡೆಯುವುದು ಖಚಿತ ಎಂದು ಹೇಳುತ್ತಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಏಕೆ? ಎನಾಯ್ತು? ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳುತ್ತಿದ್ದಾರೆ. 

1998ರಲ್ಲಿ ಸೊಹೈಲ್‌ ಹಾಗೂ ಸೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದ ಸೀಮಾ ಅವರನ್ನು ಸೊಹೈಲ್‌ ಇಷ್ಟಪಟ್ಟು ಮದುವೆಯಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 

ಸೊಹೈಲ್‌ ಖಾನ್‌ಗೆ 51, ಸೀಮಾಗೆ 46 ವರ್ಷಗಳು. ಇಬ್ಬರ ಮುಂದಿನ ಕೌಟುಂಬಿಕ ಜೀವನದ ನಡೆ ಏನು ಎಂಬುದು ಇನ್ನು ಗೊತ್ತಾಗಿಲ್ಲ. ಸೊಹೈಲ್‌ ಖಾನ್ ಮತ್ತೊಂದು ಮದುವೆಯಾಗಲಿದ್ದಾರೆ ಎಂಬ ಗಾಳಿ ಮಾತುಗಳು ಕೂಡ ಹರಿದಾಡುತ್ತಿವೆ. ಇತ್ತ ಸೀಮಾ ನಡೆ ಕೂಡ ನಿಗೂಢವಾಗಿದೆ. 

ಸಲ್ಮಾನ್‌ ಖಾನ್‌ ಅವರ ಮತ್ತೊಬ್ಬ ಸಹೋದರ ಅರ್ಬಾಜ್‌ ಖಾನ್‌ ಕೂಡ 2017ರಲ್ಲಿ ಪತ್ನಿ ಮಲೈಕಾ ಅರೋರಾಗೆ ವಿಚ್ಛೇದನ ನೀಡಿದ್ದಾರೆ. ಸದ್ಯ ಮಲೈಕಾ ನಟ ಅರ್ಜುನ್‌ ಕಪೂರ್‌ ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದಾರೆ. 

ಓದಿ... ಸಿನಿಮಾತು | ಸಾಲ ತೀರಿಸಿದ ‘777 ಚಾರ್ಲಿ’ –ನಟ ರಕ್ಷಿತ್ ಶೆಟ್ಟಿ

ಸಲ್ಮಾನ್‌ ಖಾನ್‌ ಕುಟುಂಬದಲ್ಲಿನ ವಿಚ್ಛೇದನ ಘಟನೆಗಳು ಸಲ್ಲು ಅಭಿಮಾನಿಗಳಿಗೆ ಬೇಸರ ತರಿಸಿದೆ. ‘ಖಾನ್‌‘ ಕುಟುಂಬದಲ್ಲಿ ಏನಾಗುತ್ತಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಖಾನ್‌ಗೆ ಇನ್ನೂ ಮದುವೆಯಾಗಿಲ್ಲ, ಅವರ ಇಬ್ಬರು ಸಹೋದರರು ಮದುವೆಯಾಗಿದ್ದರೂ ವಿಚ್ಛೇದನ ಪಡೆದಿದ್ದಾರೆ ಎಂದು ಬೇಸರು ವ್ಯಕ್ತಪಡಿಸಿದ್ದಾರೆ. 

ಓದಿ... ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು