ಬೀರ್‌ಬಲ್’ ಬೆಡಗಿಯಾಗಿ ಚಂದನವನ ಪ್ರವೇಶಿಸಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಕನ್ನಡಿಗರ ನೆಚ್ಚಿನ ನಟಿಯಾಗಿರುವ ರುಕ್ಮಿಣಿ ವಸಂತ್ ನಟನೆಯ ತಮಿಳು ಸಿನಿಮಾ ‘ಮದರಾಸಿ’ ಇಂದು ತೆರೆಕಂಡಿದೆ. ‘ಅಮರನ್’ ಖ್ಯಾತಿಯ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ. ವಿಕೆ ಫಿಲಂಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದೆ.