ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಕುಂತಲಂ’ ಪೋಸ್ಟರ್‌: ಶಕುಂತಲೆ ಅವತಾರದಲ್ಲಿ ನಟಿ ಸಮಂತಾ

Last Updated 21 ಫೆಬ್ರುವರಿ 2022, 8:31 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಭಿನಯಿಸುತ್ತಿರುವ ತೆಲುಗಿನ ‘ಶಾಕುಂತಲಂ’ ಸಿನಿಮಾದ ಫಸ್ಟ್​ಲುಕ್​ ಪೋಸ್ಟ್​ ಬಿಡುಗಡೆಯಾಗಿದೆ.

ಸಮಂತಾ ಶಕುಂತಲೆಯಾಗಿ ಪೋಸ್​ ನೀಡಿದ್ದಾರೆ. ಈ ಪೋಸ್ಟರ್ ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ಶಾಕುಂತಲಂ’ ಚಿತ್ರದ ಬಗ್ಗೆ ಸಮಂತಾ ಅಭಿಮಾನಿಗಳು ವಿಶೇಷವಾದ ನಿರೀಕ್ಷೆ ಇಟ್ಟುಕೊಂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ‘ಶಾಕುಂತಲಂ’ ಪೋಸ್ಟರ್‌ ಅನ್ನು ಶೇರ್‌ ಮಾಡುತ್ತಿದ್ದಾರೆ.

‘ಶಾಕುಂತಲಂ’ ಪೋಸ್ಟರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ಲೈಕ್‌ ಮಾಡಿದ್ದಾರೆ. ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಶ್ವೇತವರ್ಣದ ಸೀರೆಯಲ್ಲಿ, ಪ್ರಾಣಿ, ಪಕ್ಷಿಗಳೊಂದಿಗೆ ಸುಂದರವಾದ ಪರಿಸರದಲ್ಲಿ ಸಮಂತಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ.

ಪೌರಾಣಿಕ ಕಥಾಹಂದರ ಇರುವ ಈ ಚಿತ್ರವನ್ನು ಗುಣಶೇಖರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ನೀಲಿಮಾ ಗುಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ಮೂಡಿಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT