ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿ ಟೈಗರ್‌ನ ನೆರಳಿನಾಟ

Last Updated 18 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ನಟ ವಿನೋದ್‌ ಪ್ರಭಾಕರ್‌ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಯಾವುದೇ ಪಾತ್ರಕ್ಕೂ ಅವರು ಒಗ್ಗಿಕೊಳ್ಳಲು ಸಿದ್ಧ. ನಿರ್ದೇಶಕರ ಸೂಚನೆಗೆ ತಕ್ಕಂತೆ ದೇಹ ದಂಡಿಸುತ್ತಾರೆ. ಇತ್ತೀಚೆಗೆ ಸಿಕ್ಸ್‌ ಪ್ಯಾಕ್‌ ಮಾಡುವುದು ಎಲ್ಲೆಡೆ ಕ್ರೇಜ್‌ ಆಗಿದೆ. ವಿನೋದ್‌ ಒಂದು ಹೆಜ್ಜೆ ಮುಂದೆ ಹೋಗಿ ‘ರಗಡ್‌’ ಚಿತ್ರಕ್ಕಾಗಿ ಎಂಟು ಪ್ಯಾಕ್‌ ಮಾಡಿದ್ದಾರೆ.

ರವಿಗೌಡ ನಿರ್ದೇಶಿಸಿರುವ ‘ಶ್ಯಾಡೊ’ ಚಿತ್ರದಲ್ಲೂ ಅವರದ್ದು ರಗಡ್‌ ಲುಕ್. ‘ನನ್ನ ಹೆಸರು ಸಿಎಂ. ಆಗೆಂದಾಕ್ಷಣ ನಾನು ಮುಖ್ಯಮಂತ್ರಿಯಲ್ಲ. ಕಾಮನ್‌ ಮ್ಯಾನ್. ನನ್ನ ನೆರಳು ಕಳೆದುಹೋಗಿದೆ’ ಎಂದು ಖಡಕ್‌ ಆಗಿ ಹೇಳುವ ಟೀಸರ್‌ ಅವರ ಅಭಿಮಾನಿಗಳಿಗೆ ರಸದೌತಣ ನೀಡುತ್ತದೆ.

ಚಿತ್ರದ ಟೀಸರ್‌ ಬಿಡುಗಡೆಗೆ ‘ಚಾಲೆಂಜಿಂಗ್ಸ್ಟಾರ್’ ದರ್ಶನ್ ಆಗಮಿಸಿದ್ದರು. ಕಾಮನ್ ಮ್ಯಾನ್‌ಗೆ ಅವರು ವೇದಿಕೆಯಲ್ಲಿ ಮೆಚ್ಚುಗೆ ಸೂಚಿಸಿದರು.

‘ಮರಿ ಟೈಗರ್ ಕಂಡರೆ ನನಗೆ ತುಂಬಾ ಪ್ರೀತಿ. ಅವರ ಯಾವುದೇ ಸಿನಿಮಾ ಕಾರ್ಯಕ್ರಮಕ್ಕೂ ನಾನು ತಪ್ಪಿಸಿಕೊಳ್ಳುವುದಿಲ್ಲ. ಅವರಿಗೆ ಯಾವುದೇ ಪಾತ್ರ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತಾರೆ. ಕಂಠದಾನದಲ್ಲಿ ತೊಂದರೆಯಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಆರೋಗ್ಯವಾಗಿದ್ದಾರೆ. ಇದು ಮಾಸ್ ಚಿತ್ರ. ಎಲ್ಲರಿಗೂ ತಲುಪಲಿ’ ಎಂದು ಶುಭ ಕೋರಿದರು.

‘ದರ್ಶನ್‌ ನಟಿಸಿರುವ ಪ್ರತಿ ಸಿನಿಮಾದಲ್ಲೂ ನನಗೆ ಅವಕಾಶ ಇದ್ದೇ ಇರುತ್ತದೆ. ಈ ಚಿತ್ರದಲ್ಲೂ ಅವರ ಶಿಫಾರಸು ಇರಬಹುದು’ ಎಂದರು ನಟ ಶರತ್‌ ಲೋಹಿತಾಶ್ವ.

ನಿರ್ದೇಶಕ ರವಿಗೌಡ ಅವರು ಹುಟ್ಟೂರು ಬಳ್ಳಾರಿ. ಅವರು ಭದ್ರವಾಗಿ ನೆಲೆಯೂರಿದ್ದು ಹೈದರಾಬಾದ್‌ನಲ್ಲಿ. ಅವರು ಪೂರಿ ಜಗನ್ನಾಥ್ ಅವರ ಶಿಷ್ಯ. ‘ಇದು ಪಕ್ಕಾ ಆ್ಯಕ್ಷನ್. ಥ್ರಿಲ್ಲರ್‌ ಚಿತ್ರ’ ಎಂದರು.

ನಾಯಕ ನಟ ವಿನೋದ್‌ ಪ್ರಭಾಕರ್, ‘ದರ್ಶನ್‌ ಅವರು ನನಗೆ ಧೈರ್ಯ ತುಂಬದಿದ್ದರೆ ನಾನು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಈ ಹಿಂದೆ ಚಿತ್ರಕ್ಕೆ ಡಬ್ಬಿಂಗ್ ಮಾಡಲು ಹದಿನೈದು ದಿನ ತೆಗೆದುಕೊಳ್ಳುತ್ತಿದ್ದೆ. ಆಪರೇಷನ್‌ ಮಾಡಿಸಿದ ನಂತರ ಮೂರೇ ದಿನಕ್ಕೆ ಮುಗಿಸಿದ್ದೇನೆ’ ಎಂದು ಹೇಳಿಕೊಂಡರು.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಲೋಕೇಶ್ ಅನುಭವ ಹಂಚಿಕೊಂಡರು. ನಿರ್ಮಾಪಕ ಚಕ್ರವರ್ತಿ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಮನೋಹರ್‌ ಜೋಶಿ ಅವರದ್ದು. ಅಚ್ಚು ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT