ಮುಂಬೈ: ‘ಪಠಾಣ್’ ಚಿತ್ರದ ಯಶಸ್ಸಿನಲ್ಲಿರುವ ನಟ ಶಾರುಖ್ ಖಾನ್ ಅವರು ಬರೋಬ್ಬರಿ ₹10 ಕೋಟಿ ಮೌಲ್ಯದ ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ.
ಕಾರಿನ ಚಿತ್ರಗಳು ಹಾಗೂ ವಿಡಿಯೊಗಳನ್ನು ಅಭಿಮಾನಿಗಳು ಜಾಲತಾಣಗಳಲ್ಲಿ ಹಂಚಿಕೊಂಡು ನಟನಿಗೆ ಶುಭಾಶಯ ಕೋರಿದ್ದಾರೆ.
ರೋಲ್ಸ್ ರಾಯ್ಸ್ ಕಲ್ಲಿಯನ್– ಬ್ಲ್ಯಾಕ್ ಬ್ಯಾಡ್ಜ್ ಕಾರು ಇದಾಗಿದ್ದು, ಎಕ್ಸ್ ಶೋ ರೂಂ ಬೆಲೆ ₹8.20 ಕೋಟಿ ಇದ್ದು, ತೆರಿಗೆಗಳೆಲ್ಲ ಸೇರಿ ₹10 ಕೋಟಿ ಬೆಲೆ ಬಾಳುತ್ತೆ.
ರೋಲ್ಸ್ ರಾಯ್ಸ್ ಕಾರುಗಳಲ್ಲಿ ಕಲ್ಲಿಯನ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಅತ್ಯಂತ ದುಬಾರಿಯಾಗಿದ್ದು, ಇದು ಭಾರತದಲ್ಲಿ ಒಂದೇ ಕಾರು ಮಾರಾಟವಾಗಿದೆ ಎಂದು ತಿಳಿದು ಬಂದಿದೆ. ಈಗ ಅದೇ ಕಾರಿನ ಒಡೆಯನಾಗಿ ಶಾರುಖ್ ಖಾನ್ ಗಮನ ಸೆಳೆದಿದ್ದಾರೆ. ಇನ್ನು ಶಾರುಖ್ ಅವರ ಬಳಿ ಇರುವ ಅತೀ ದುಬಾರಿ ಕಾರು ಕೂಡ ಇದಾಗಿದೆ.
ಸದ್ಯ ಪಠಾಣ್ ಚಿತ್ರದ ಯಶಸ್ಸಿನಲ್ಲಿರುವ ಶಾರುಖ್ ಖಾನ್ ಅವರು ಇತ್ತೀಚೆಗಷ್ಟೇ ಪಠಾಣ್ ಸಕ್ಸಸ್ ಮೀಟ್ ಅನ್ನು ಭರ್ಜರಿಯಾಗಿ ನಡೆಸಿದ್ದಾರೆ. ಆಟ್ಲಿ ನಿರ್ದೇಶನದಲ್ಲಿ ಬರುತ್ತಿರುವ ಬಹುನಿರೀಕ್ಷಿತ ‘ಜವಾನ್’ ಚಿತ್ರದತ್ತ ಶಾರುಖ್ ಸದ್ಯ ಗಮನ ಹರಿಸಿದ್ದಾರೆ. ಜವಾನ್ ಇದೇ ವರ್ಷ್ ಜೂನ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.