ಸಿನಿಮಾ ಕುಟುಂಬದ ಹಿನ್ನೆಲೆ, ಗಾಡ್‌ಫಾದರ್ ಇಲ್ಲದೇ ‘ಬಾಲಿವುಡ್ ಬಾದ್‌ಶಾ’ನಾಗಿ ಬೆಳೆದುನಿಂತ ಶಾರುಕ್ ಖಾನ್ ಬಣ್ಣದ ಬದುಕಿನ ಪಯಣಕ್ಕೆ ಈಗ ಭರ್ತಿ 28 ವರ್ಷ!

ಈ ಮಹತ್ವದ ಸಂದರ್ಭದಲ್ಲಿ ಶಾರುಕ್ ತಮ್ಮದೇ ಡ್ಯಾಪರ್ ಮೋನೊಕ್ರೋಮ್ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದರೊಂದಿಗೆ ಬಾಲಿವುಡ್ ಸುದೀರ್ಘ ಪಯಣದ ಕುರಿತು ಆಪ್ತ ಬರಹವೊಂದನ್ನು ಹಂಚಿಕೊಂಡಿದ್ದಾರೆ.

‘ಯಾವಾಗ ಅಭಿಯನದ ತುಡಿತ ನನ್ನ ಜೀವನದ ಉದ್ದೇಶ ಮತ್ತು ಉದ್ಯೋಗವಾಗಿ ಬದಲಾಯಿತೋ ಗೊತ್ತಿಲ್ಲ. ಇಷ್ಟು ವರ್ಷ ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆ. ವೃತ್ತಿಪರತೆಗಿಂತ ವೃತ್ತಿ ಕಡೆಗಿನ ಸೆಳೆತದ ಬಗ್ಗೆ ನನಗೆ ಹೆಚ್ಚು ನಂಬಿಕೆ ಇದೆ. ನಟನೆಯ ಬಗ್ಗೆ ಪ್ಯಾಷನ್‌ನಿಂದಾಗಿಯೇ ಇನ್ನಷ್ಟು ವರ್ಷ ನಾನು ನಿಮ್ಮ ಮನರಂಜಿಸುತ್ತ ಕಾಲಕಳೆಯುತ್ತೇನೆ ಎಂಬ ಭರವಸೆ ಇದೆ’ ಎಂಬ ಭಾವನಾತ್ಮಕ ಕಿರು ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.

ಉದ್ದನೆ ಕೂದಲು ಮತ್ತು ಕುರುಚಲು ಗಡ್ಡದ ವಿಭಿನ್ನವಾದ ಶಾರುಕ್ ಚಿತ್ರವನ್ನುಟ್ವೀಟರ್‌ನಲ್ಲಿ ನೋಡಿದ ನಟ ಅರ್ಷದ್ ವಾರ್ಸಿ ಹಾಕಿದ ಪೋಸ್ಟ್ ಇದೀಗ ಎಲ್ಲರ ಗಮನ ಸೆಳೆಯುತ್ತದೆ. ಅಂದಹಾಗೆ ಈ ಚಿತ್ರವನ್ನು ಕ್ಲಿಕ್ ಮಾಡಿದ್ದು ಸ್ವತಃ ಶಾರುಕ್ ಪತ್ನಿ ಗೌರಿ ಖಾನ್!

‘ನಿಮ್ಮ ಡ್ಯಾಶಿಂಗ್ ಲುಕ್ ಚಿತ್ರ ಪುರುಷರನ್ನೂ ಸೆಳೆಯುವಷ್ಟು ಆಕರ್ಷಕವಾಗಿದೆ. ಅಷ್ಟೊಂದು ಚುಂಬಕ ಶಕ್ತಿ ನಿಮ್ಮ ಈ ಚಿತ್ರಕ್ಕಿದೆ’ ಎಂದು ಅರ್ಷದ್ ವಾರ್ಷಿ ಸ್ಮೈಲಿ ಇಮೋಜಿಯೊಂದಿಗೆ ತಮಾಷೆ ಮಾಡಿದ್ದಾರೆ. ಅವರ ಈ ಟ್ವೀಟ್ ಅನ್ನು ಕೆಲವರು ಅರ್ಷದ್ ಪತ್ನಿ ಮಾರಿಯಾ ಗೊರೆಟ್ಟಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

‘ಯಾವುದಕ್ಕೂ ಹುಷಾರು! ನಿಮ್ಮ ಗಂಡನನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಿ. ಅವರ ಮೇಲೊಂದು ಕಣ್ಣಿಡಿ’ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ‘ನಿಮ್ಮ ಆಸೆ, ಆಕಾಂಕ್ಷೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ’ ‘ ನೋ ಆರ್ಷದ್ ವಾರ್ಸಿ, ದಯವಿಟ್ಟು ಹಾಗೆಲ್ಲ ಮಾಡಬೇಡಿ’ ಎಂದು ಕಾಲೆಳೆದಿದ್ದಾರೆ.

1992ರಲ್ಲಿ ಬಿಡುಗಡೆಯಾದ ‘ದೀವಾನಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ದೆಹಲಿ ಮೂಲದ ಈ ಪಠಾಣ್ ವೃತ್ತಿ ಬದುಕಿನಲ್ಲಿ ಮತ್ತೆ ಹಿಂದಿರುಗಿ ನೋಡಿದ್ದಿಲ್ಲ. ಶಾರುಕ್ ನಟಿಸಿದ ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ಪಾತ್ರದಲ್ಲಿ ರಿಷಿ ಕಪೂರ್ ಮತ್ತು ದಿವ್ಯಾ ಭಾರತಿ ನಟಿಸಿದ್ದರು. ಎರಡನೇ ಹೀರೊ ಪಾತ್ರ ನಿರ್ವಹಿಸಿದ್ದ ಶಾರುಕ್, ‘ದೀವಾನಾ’ ನಂತರ ಒಂದಾದ ಮೇಲೊಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತ ಬಂದರು. 58 ವರ್ಷದ ‘ಕಿಂಗ್ ಖಾನ್’ ಈಗಲೂ ಬಾಲಿವುಡ್‌ನ ನಂಬರ್ 1 ನಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.