ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರುಖ್ ಖಾನ್ ಬರ್ತಡೇ ದಿನ ಹವಾ ಸೃಷ್ಟಿಸಿದ ‘ಪಠಾಣ್’ ಟೀಸರ್

Last Updated 2 ನವೆಂಬರ್ 2022, 9:21 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ಪ್ರಮುಖ ಪಾತ್ರದಲ್ಲಿ ಇರುವ ‘ಪಠಾಣ್‌’ ಚಿತ್ರದ ಟೀಸರ್ ಇಂದುಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಇಂದು ಶಾರುಖ್ ಅವರ ಜನ್ಮದಿನವೂ ಇರುವುದರಿಂದ ಅವರ ಅಭಿಮಾನಿಗಳಿಗೆ ಇದು ಸಂತಸ ಮೂಡಿಸಿದೆ.

ಟೀಸರ್ ಗಮನಿಸಿದರೆ ಇದೊಂದು ಔಟ್ ಆ್ಯಂಡ್ಔಟ್ ಮಾಸ್ ಆಕ್ಷನ್ ಸಿನಿಮಾವಾಗಿದ್ದು, ಶಾರುಖ್ ಸಿಕ್ಸ್ ಪ್ಯಾಕ್‌ನಲ್ಲಿ ಕಾಣಿಸಿಕೊಂಡು ಮೈನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಶಾರುಖ್‌ ಗೂಢಚಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ.ಜಾನ್‌ ಅಬ್ರಹಾಂ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆ್ಯಕ್ಷನ್‌–ಥ್ರಿಲ್ಲರ್‌ ಕಥೆ ಒಳಗೊಂಡಿರುವ 'ಪಠಾಣ್‌' ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ 2023ರ ಜನವರಿ 25ರಂದು ತೆರೆಗೆ ಬರಲಿದೆ. 2018ರಲ್ಲಿ ತೆರೆಕಂಡಿದ್ದ 'ಝೀರೊ' ಸಿನಿಮಾದ ನಂತರ ಶಾರುಖ್‌ ಅಭಿನಯಿಸಿರುವ ಸಿನಿಮಾ ಪಠಾಣ್‌.

ಇನ್ನುಹಿಂದಿಯ ಸುದ್ದಿ ವಾಹಿನಿಗಳು ವರದಿ ಮಾಡಿರುವಂತೆ ‘ಪಠಾಣ್‌‘ ಸಿನಿಮಾದ ಒಟಿಟಿ ಪ್ರಸಾರದ ಹಕ್ಕುಗಳು ಸುಮಾರು ₹200 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿವೆ ಎನ್ನಲಾಗಿದೆ. ಆದಾಗ್ಯೂ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.

ಯಶ್‌ ರಾಜ್‌ ಬ್ಯಾನರ್‌ ಅಡಿ ಈ ಸಿನಿಮಾವನ್ನುನಿರ್ಮಾಣ ಮಾಡಲಾಗಿದೆ. ಈ ಸಂಸ್ಥೆಯವರು ತಮ್ಮ ಬಹುತೇಕ ಸಿನಿಮಾಗಳ ಒಟಿಟಿ ಪ್ರಸಾರ ಹಕ್ಕನ್ನು ‘ಅಮೆಜಾನ್ ಪ್ರೈಮ್‘ಗೆ ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT