ದುಬೈ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅರಬ್ ನಗರ ದುಬೈನಲ್ಲೂ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸುವ ಪ್ರಯತ್ನ ನಡೆದಿದೆ.

ನಿರ್ದೇಶಕ ಅಟ್ಲಿ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಜೊತೆ ತಮ್ಮ ಬಹು ನಿರೀಕ್ಷಿತ ಆ್ಯಕ್ಷನ್ ಚಿತ್ರ ‘ಜವಾನ್’ ಪ್ರಚಾರಕ್ಕಾಗಿ ಶಾರುಖ್ ದುಬೈಗೆ ತೆರಳಿದ್ದು, ಚಿತ್ರದ ಟ್ರೇಲರ್ ಅನ್ನು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲಾಯಿತು. ಶಾರುಖ್ ಸಮ್ಮುಖದಲ್ಲೇ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಇದರ ಜೊತೆಗೆ, ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲು 'ಜವಾನ್' ಚಿತ್ರದ 'ಚಲೇಯಾ' ಮತ್ತು 'ಜಿಂದಾ ಬಂದಾ' ಹಾಡುಗಳಿಗೆ ಶಾರುಖ್ ಹೆಜ್ಜೆ ಹಾಕಿದರು.

ಸೆಪ್ಟೆಂಬರ್ 7 ರಂದು ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ.

ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಮಣಿ, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಮುಂತಾದ ತಾರಾಗಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.