ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಖ್‌ನ ಮೊಬೈಲ್ ಥಿಯೇಟರ್‌ನಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಪ್ರದರ್ಶನ

Last Updated 25 ಜನವರಿ 2023, 10:35 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ತೆರೆ ಕಂಡಿದ್ದು, ಲಡಾಖ್‌ನ ಲೆಹ್‌ನಲ್ಲಿರುವ ಟ್ರಾವೆಲಿಂಗ್ ಸಿನಿಮಾ ಹಾಲ್ ‘ಪಿಕ್ಚರ್‌ಟೈಮ್ ಡಿಜಿಪ್ಲೆಕ್ಸ್‌’ ನಲ್ಲಿಯೂ ಪ್ರದರ್ಶನಗೊಳ್ಳಲಿದೆ. ಇದನ್ನು ವಿಶ್ವದ ಅತಿ ಎತ್ತರ ಪ್ರದೇಶದ ಮೊಬೈಲ್ ಥಿಯೇಟರ್ ಎಂದು ಪರಿಗಣಿಸಲಾಗಿದೆ.

4 ವರ್ಷಗಳ ಬಳಿಕ ಶಾರುಖ್ ಖಾನ್ ಕಮ್‌ ಬ್ಯಾಕ್ ಮಾಡಿರುವ ಚಿತ್ರ ಇದಾಗಿದ್ದು, ದೇಶದಾದ್ಯಂತ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಲಡಾಖ್‌ನ 11,562 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ‘ಪಿಕ್ಚರ್‌ಟೈಮ್’ಮೊಬೈಲ್ ಥಿಯೇಟರ್‌ನಲ್ಲಿ ಪ್ರತಿ ದಿನ ಪಠಾಣ್ ಚಿತ್ರ 4 ಪ್ರದರ್ಶನ ಕಾಣಲಿದೆ.

ತೆಲಂಗಾಣದ ಅಸಿಫಾಬಾದ್, ರಾಜಸ್ಥಾನದ ಸರ್ದಾರ್ ಶಹರ್ ಮತ್ತು ಅರುಣಾಚಲ ಪ್ರದೇಶದಲ್ಲಿರುವ ಪಿಕ್ಚರ್‌ಟೈಮ್ ಕಂಪನಿಯ ಮೊಬೈಲ್ ಥಿಯೇಟರ್‌ನಲ್ಲೂ ಚಿತ್ರ ಪ್ರದರ್ಶನವಾಗಲಿದೆ.

‘ಇಡೀ ದೇಶದ ಜನ ಪಠಾಣ್ ಸಿನಿಮಾ ನೋಡಲು ಉತ್ಸುಕವಾಗಿರುವ ರೀತಿಯೇ ಲೆಹ್‌ನ ಜನ ಕೂಡ ಇದ್ದಾರೆ. ಸಾಮಾನ್ಯ ಥಿಯೇಟರ್‌ಗಳಿಲ್ಲದ ಜನರಿಗೂ ಚಿತ್ರ ಪ್ರದರ್ಶಿಸುವ ನಮ್ಮ ಪ್ರಯತ್ನ ಮುಂದುವರಿಸಿದ್ದೇವೆ’ಎಂದು ಪಿಕ್ಚರ್‌ಟೈಮ್ ಸಿಇಒ ಸುಶಿಲ್ ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT