ಸೋಮವಾರ, ಮೇ 10, 2021
19 °C

ಶಾರೂಕ್‌ ಮಗನಿಗೆ ನಿರ್ದೇಶನವೇ ಇಷ್ಟವಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲಿ ಈಗ ಸ್ಟಾರ್‌ ಮಕ್ಕಳು ಒಬ್ಬೊಬ್ಬರಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಕರಣ್‌ ಡಿಯೋಲ್‌, ಅನನ್ಯಾ ಪಾಂಡೆ, ಸಾರಾ ಅಲಿಖಾನ್‌ ಇದಕ್ಕೆ ಉದಾಹರಣೆ. ಶಾರೂಕ್‌ ಖಾನ್‌ ಮಕ್ಕಳಾದ ಸುಹಾನಾ ಖಾನ್‌ ಹಾಗೂ ಆರ್ಯನ್‌ ಖಾನ್‌ ಅವರ ಬಾಲಿವುಡ್‌ ಪ್ರವೇಶದ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇವೆ.  ಇಲ್ಲಿಯವರೆಗೂ ಶಾರೂಕ್‌ ತಮ್ಮ ಮಕ್ಕಳ ಸಿನಿಮಾ ಆಸಕ್ತಿ, ಅಭಿರುಚಿ ಬಗ್ಗೆ ಏನೂ ಮಾತನಾಡಿಲ್ಲ. ಈಗ ಮಗಳು ಸುಹಾನಾಳಿಗೆ ನಟನೆ ಬಗ್ಗೆ ಆಸಕ್ತಿ, ಮಗ ಆರ್ಯನ್‌ ನಿರ್ದೇಶನದಲ್ಲಿ ಆಸಕ್ತಿ ತೋರಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಾರೂಕ್‌, ‘ನನ್ನ ಮಗ ನಿರ್ದೇಶನದಲ್ಲಿ ಆಸಕ್ತಿ ತೋರಿಸುತ್ತಿದ್ದಾನೆ. ಅವನು ಬರವಣಿಗೆ, ನಿರ್ದೇಶನದ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಆಸಕ್ತಿ , ಕುತೂಹಲ ತೋರಿಸುತ್ತಾನೆ. ಮಗಳು ಸುಹಾನಾ ನಟನೆಯಲ್ಲಿ ಮುಂದುವರಿಯಲು ಇಷ್ಟಪಡುತ್ತಾಳೆ. ರಂಗಭೂಮಿ, ನಟನೆ ಬಗ್ಗೆ ಕಲಿಯುತ್ತಿದ್ದಾಳೆ’ ಎಂದು ಹೇಳಿದ್ದಾರೆ.

‘ಒಂದು ವೇಳೆ ಇಬ್ಬರೂ ಮಕ್ಕಳು ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಲು ಇಷ್ಟಪಟ್ಟರೆ, ಅವರಿಬ್ಬರೂ ಮೊದಲು ನಟನಾ ಕೌಶಲಗಳ ಬಗ್ಗೆ ತಿಳಿದುಕೊಳ್ಳಲೇಬೇಕು’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಕೇಶ್ ಶರ್ಮಾ ಪಾತ್ರದಲ್ಲಿ ಶಾರುಕ್?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು