ಮುಂಬೈ: ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ಜವಾನ್’ ಬಿಡುಗಡೆಗೆ ಸಿದ್ಧವಿದೆ. ಆದರೆ ಇದೀಗ ಚಿತ್ರದ ಕೆಲವೊಂದು ತುಣುಕುಗಳು ಟ್ವಿಟರ್‌ನಲ್ಲಿ ಸೋರಿಕೆಯಾಗಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಈ ಪ್ರಕರಣ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿತ್ತು. ಸೋರಿಕೆಯಾದ ವಿಡಿಯೊವನ್ನು ತೆಗೆದು ಹಾಕಲು ಟ್ವಿಟರ್‌ಗೆ ಕೋರ್ಟ್ ತಿಳಿಸಿದೆ.
ನ್ಯಾಯಾಲಯದ ಆದೇಶದ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿನಿಮಾ ಚಿತ್ರೀಕರಣದ ವೇಳೆ ಸೆಟ್‌ಗಳಲ್ಲಿ ಮೊಬೈಲ್ ಬಳಸುವಂತಿರಲಿಲ್ಲ ಆದಾಗ್ಯೂ ವಿಡಿಯೊ ಸೋರಿಕೆ ಆಗಿವೆ ಎಂದು ಚಿತ್ರತಂಡ ಹೇಳಿದೆ.
ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
’ಜವಾನ್’ ಚಿತ್ರ ಇದೇ ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.