ಸೋಮವಾರ, ಅಕ್ಟೋಬರ್ 3, 2022
24 °C

ಸೆಕ್ಸ್‌ಗೆ ಒತ್ತಾಯಿಸುವ ಹುಡುಗಿ ಹುಡುಗಿಯೇ ಅಲ್ಲ: ‘ಶಕ್ತಿಮಾನ್’ ಖನ್ನಾ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತದ 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಸೂಪರ್ ಹೀರೊ 'ಶಕ್ತಿಮಾನ್' ಧಾರಾವಾಹಿ ನಟ ಮುಕೇಶ್ ಖನ್ನಾ ಅವರು ಇತ್ತೀಚೆಗೆ ತಮ್ಮದೇಯಾದ ಒಂದು ಯುಟ್ಯೂಬ್ ಚಾನಲ್ ಪ್ರಾರಂಭಿಸಿ ಗಮನ ಸೆಳೆದಿದ್ದಾರೆ.

Bheeshm International ಎಂಬ ಯುಟ್ಯೂಬ್ ಚಾನಲ್ ನಡೆಸುತ್ತಿರುವ ಅವರು ಜೈ ಹಿಂದ್ ಅಭಿಯಾನಕ್ಕಾಗಿ ತಮ್ಮ ಈ ಚಾನಲ್ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಸ್ನೇಹಿತರ ಜೊತೆ ಮುಕ್ತ ಮಾತುಕತೆ, ಸಂದರ್ಶನಗಳು, ಅಭಿಪ್ರಾಯಗಳು, ಸಿನಿಮಾ, ಟಿವಿಗಳಿಗೆ ಸಂಬಂಧಿಸಿದ ಚರ್ಚೆಗಳು ಅದರಲ್ಲಿ ಪ್ರಸಾರವಾಗುತ್ತಿವೆ.

ಹೀಗೆ ಅವರು ಕಳೆದ ವಾರ ಕ್ಯಾ ಆಪಕೊ ಬಿ ಐಸಿ ಲಡಕಿಯೋನ್ ಲುಬಾತಿ ಹೈ? ಎಂಬ ಟೈಟಲ್‌ನಲ್ಲಿ ಒಂದು ವಿಡಿಯೊ ಪ್ರಸಾರ ಮಾಡಿದ್ದು, ಸೆಕ್ಸ್ ರಾಕೆಟ್‌ ಹಾಗೂ ಹನಿ ಟ್ರ್ಯಾಪ್‌ಗಳ ಬಗ್ಗೆ ಮಾತನಾಡಿದ್ದಾರೆ.

‘ಮದುವೆಯಾಗದ ಯಾವುದೇ ಹುಡುಗಿ ಹುಡುಗನ ಬಳಿ ಅಥವಾ ಬಾಯ್‌ಫ್ರೆಂಡ್ ಬಳಿ ಸೆಕ್ಸ್‌ಗೆ ಒತ್ತಾಯಿಸಿದರೆ ಅವಳು ಹುಡುಗಿಯೇ ಅಲ್ಲ’ ಎಂದು ಅವರು ಹೇಳಿದ್ದಾರೆ.

‘ಬಾಯ್‌ಫ್ರೆಂಡ್‌ ಬಳಿ ಸೆಕ್ಸ್‌ಗೆ ಒತ್ತಾಯಿಸುವ ಹುಡುಗಿ ದಂಧೆ ನಡೆಸುವವಳ ಅಥವಾ ಒಬ್ಬ ವೇಶ್ಯೆಗೆ ಸಮ’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ‘ಏಕೆಂದರೆ ಸುಸಂಸ್ಕೃತ ಕುಟುಂಬಕ್ಕೆ ಸೇರಿದ ಯಾವುದೇ ಹುಡುಗಿ ಆ ರೀತಿ ಹೇಳಲು ಸಾಧ್ಯವಿಲ್ಲ’ ಎಂದು ಮುಕೇಶ್ ಖನ್ನಾ ಅಭಿಪ್ರಾಯಪಟ್ಟಿದ್ದಾರೆ.

 

ಆದರೆ, ಅನೇಕ ನೆಟ್ಟಿಗರು ಖನ್ನಾ ಅವರ ಈ ಹೇಳಿಕೆ ಖಂಡಿಸಿದ್ದಾರೆ. ‘ಶಕ್ತಿಮಾನ್ ಅವರೇ ನಿಮ್ಮಲ್ಲೀಗ ಶಕ್ತಿನೂ ಇಲ್ಲ, ನೀವು ಮನುಷ್ಯನೂ ಅಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ಮಾತು ಕೇಳಿ ಅನಕ್ಷರಸ್ಥರು ನಗುತ್ತಾರೆ ಎಂದು ಕೆಲವರು ಹೇಳಿದ್ದಾರೆ. ಸೆಕ್ಸ್‌ ಎನ್ನುವುದು ಅವರವರ ವೈಯಕ್ತಿಕ ಎಂದು ಅಭಿಪ್ರಾಯಪಟ್ಟಿದ್ದಾರೆ.

1997 ರಿಂದ 2005 ರವರೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಎಂಬ ಕಾಮಿಕ್ ಧಾರಾವಾಹಿಯಲ್ಲಿ ಖನ್ನಾ ಅವರು ಶಕ್ತಿಮಾನ್ ಹಾಗೂ ಓಂಕಾರನಾಥ್ ಶಾಸ್ತ್ರೀ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡು ಮಕ್ಕಳನ್ನು ರಂಜಿಸಿದ್ದರು. ಅಲ್ಲದೇ ಅವರು ಕೆಲ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದರು.

2019 ರಿಂದ ಖನ್ನಾ ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, ಅವರ ಚಾನಲ್‌ಗೆ ಸದ್ಯ 1.15 ಮಿಲಿಯನ್ ಚಂದಾದಾರರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು