ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Cinema: ‘ನಾ ನಿನ್ನ ಬಿಡಲಾರೆ’ಗೆ ಶರಣ್‌ ಸಾಥ್‌

Published : 19 ಸೆಪ್ಟೆಂಬರ್ 2024, 18:54 IST
Last Updated : 19 ಸೆಪ್ಟೆಂಬರ್ 2024, 18:54 IST
ಫಾಲೋ ಮಾಡಿ
Comments

ಬಹುತೇಕ ಹೊಸಬರಿಂದಲೇ ಕೂಡಿರುವ ‘ನಾ ನಿನ್ನ ಬಿಡಲಾರೆ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶರಣ್ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಸಾಥ್‌ ನೀಡಿದರು. ಚಿತ್ರಕ್ಕೆ ನವೀನ್‌ ಜಿ.ಎಸ್ ಆ್ಯಕ್ಷನ್‌ ಕಟ್‌ ಹೇಳಿದ್ದು, ಶ್ರೀಮತಿ ಭಾರತಿ ಬಾಳಿ ಬಂಡವಾಳ ಹೂಡಿದ್ದಾರೆ. 

‘ನಟಿ, ನಿರ್ಮಾಪಕಿ ಭಾರತಿ ಅವರ ಶ್ರಮಕ್ಕೆ ತಕ್ಕ ಚಿತ್ರ ಇದಾಗಿದೆ. ಆಸಕ್ತಿ, ಗುರಿ, ಶ್ರಮ ಎಲ್ಲಿರುತ್ತದೆಯೋ ಅಲ್ಲಿ ಗೆಲುವು ಖಂಡಿತ. ಓರ್ವ ಹೆಣ್ಣು ಮಗಳು ಇಷ್ಟು ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ ಎಂದರೆ, ಇವರು ಪ್ರಥಮ ಪ್ರಯತ್ನದಲ್ಲಿ ಗೆದ್ದಂತಾಗಿದೆ. ನಾನು ನಾಲ್ಕೈದು ವರ್ಷದವನಿದ್ದಾಗ ಅನಂತನಾಗ್, ಲಕ್ಷ್ಮೀ ಅವರ ‘ನಾ ನಿನ್ನ ಬಿಡಲಾರೆ’ ಸಿನಿಮಾ ಮರು ಬಿಡುಗಡೆಗೊಂಡಿತ್ತು. ಆಗ ನಮ್ಮ ತಂದೆ ಆ ಚಿತ್ರ ತೋರಿಸಿದ್ದರು. ನಾನು ಎಲ್ಲಾ ಭಾಷೆಯ ದೆವ್ವಗಳ ಸಿನಿಮಾಗಳನ್ನು ತಪ್ಪದೆ ನೋಡುತ್ತೇನೆ. ಅದು ನನ್ನ ನೆಚ್ಚಿನ ಜಾನರ್‌’ ಎಂದರು ಶರಣ್‌. 

ಹೊಸಬರಾದ ಪಂಚೇಂದ್ರಿಯ, ಅಂಬಾಲಿ ಭಾರತಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.  ಮಾಂತೇಶ್, ಸೀರುಂಡೆ ರಘು ಮೊದಲಾದವರು ತಾರಾಗಣದಲ್ಲಿದ್ದಾರೆ.

‘ನಾನು ಕಳೆದ 8 ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಈ ಚಿತ್ರವನ್ನು ಆರಂಭಿಸಲು ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆ. ಇದು ಸೈಕಲಾಜಿಕಲ್, ಹಾರರ್, ಥ್ರಿಲಿಂಗ್, ಸಸ್ಪೆನ್ಸ್ ಚಿತ್ರ. ವೈದ್ಯಕೀಯ ಸಂಗತಿಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಸದ್ಯ ಚಿತ್ರ ಸೆನ್ಸಾರ್ ಕಾರ್ಯ ಮುಗಿಸಿ ಬಿಡುಗಡೆಗೆ ಸಿದ್ಧವಿದೆ’ ಎಂದರು ನಿರ್ದೇಶಕರು.

ವೀರೇಶ್ ಛಾಯಾಚಿತ್ರಗ್ರಹಣ, ಎಂ.ಎಸ್. ತ್ಯಾಗರಾಜ್ ಸಂಗೀತ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT