ಮಂಗಳವಾರ, ಜನವರಿ 21, 2020
22 °C
‘ಟಿಕ್‌ಟಾಕ್‌’ಗೆ ಬಂದ ಶಿಲ್ಪಶೆಟ್ಟಿ

‘ಟಿಕ್‌ಟಾಕ್‌’ನಲ್ಲೂ ಶಿಲ್ಪಾ ಜಾದೂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸವರ್ಷದ ಸಂಭ್ರಮಕ್ಕೆ ಹೊಸದೊಂದು ಹೆಜ್ಜೆ ಇಡುವ ಸಂಕಲ್ಪದೊಂದಿಗೆ ‘ಟಿಕ್‌ಟಾಕ್‌’ಗೆ ಬಂದಿದ್ದಾರೆ ಶಿಲ್ಪಾಶೆಟ್ಟಿ. ಇವರ 2020ನೇ ಹೊಸವರ್ಷದ ನಿರ್ಣಯಗಳಲ್ಲಿ ‘ಟಿಕ್‌ಟಾಕ್‌’ ಖಾತೆ ತೆರೆಯಬೇಕು ಎಂಬುದೂ ಒಂದಂತೆ.

ಡಿಸೆಂಬರ್ ಅಂತ್ಯದಲ್ಲಿ ಟಿಕ್‌ಟಾಕ್ ಖಾತೆ ತೆರೆದು ಮೊದಲ ವಿಡಿಯೊ ಹಾಕಿರುವ ಶಿಲ್ಪಾ ‘ಹಾಯ್, ಇನ್ನು ನಾನು ಟಿಕ್‌ಟಾಕ್‌ನಲ್ಲಿಯೂ ಸಿಗುತ್ತೇನೆ. ಯಾಕಾಗಬಾರದು?’ ಎಂದು ಖುಷಿಯಲ್ಲಿ ಹೇಳಿಕೊಂಡಿರುವ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. 33 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಖಾತೆ ತೆರೆದ ಒಂದೇ ದಿನದಲ್ಲಿ ಹತ್ತು ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. 

ಶಿಲ್ಪಾ ಶೆಟ್ಟಿ ಮಾಡುತ್ತಿರುವ ವಿಡಿಯೊಗಳಿಗೆ ಪತಿ ರಾಜ್ ಕುಂದ್ರಾ ಕೂಡ ಕೈ ಜೋಡಿಸಿದ್ದಾರೆ. ‘ಮೈನೆ ಪ್ಯಾರ್‌ ಕಿಯಾ’, ‘ದಿಲ್‌ ದಿವಾನ’ ಹಾಡುಗಳಿಗೆ ನಗುವ ಹಿನ್ನೆಲೆ ಧ್ವನಿ ಸೇರಿಸಿ ತಮಾಷೆಯಾಗಿ ಮಾಡಿರುವ ವಿಡಿಯೊಗಳು ಹೆಚ್ಚು ಜನಪ್ರಿಯಗೊಂಡಿವೆ.

30 ವರ್ಷಗಳ ಹಿಂದೆ ಬಿಡುಗಡೆಯಾಗಿ ಹೊಸ ಟ್ರೆಂಡ್‌ ಹುಟ್ಟು ಹಾಕಿದ ಸಲ್ಮಾನ್‌ ಖಾನ್‌–ಭಾಗ್ಯಶ್ರೀ ಅಭಿನಯದ ‘ಮೈನೆ ಪ್ಯಾರ್ ಕಿಯಾ'  ಹಾಡಿಗೆ ಶಿಲ್ಪಾ ಮತ್ತು ರಾಜ್‌ ಟಿಕ್‌ಟಾಕ್‌ ಮಾಡಿದ್ದಾರೆ. ಸದ್ಯ 18 ವಿಡಿಯೊ ಅಪ್‌ಲೋಡ್ ಮಾಡಿರುವ ಶಿಲ್ಪಾ ಅವರನ್ನು 50 ಲಕ್ಷ ಫಾಲೋ ಮಾಡುತ್ತಿದ್ದಾರೆ. ಕೋಟ್ಯಂತರ ಜನರು ಇವರ ವಿಡಿಯೊಗಳನ್ನು ಲೈಕ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು