ಭಾನುವಾರ, ಅಕ್ಟೋಬರ್ 24, 2021
28 °C

ವೈಷ್ಣೋದೇವಿಯ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ವೈಷ್ಣೋದೇವಿಯ ದರ್ಶನ ಪಡೆದಿದ್ದಾರೆ.

ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿರುವ ಹೆಸರಾಂತ ಯಾತ್ರಾ ಸ್ಥಳ ವೈಷ್ಣೋದೇವಿ ಗುಹೆಗೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ ದೇವಿಯ ದರ್ಶನ ಪಡೆದಿದ್ದಾರೆ.

ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಬುಧವಾರ ಸಲ್ಲಿಕೆಯಾದ ಬೆನ್ನಲ್ಲೇ ವೈಷ್ಣೋದೇವಿಯ ದರ್ಶನಕ್ಕೆ ತೆರಳಿದ್ದಾರೆ. ಯಾತ್ರಾ ಸ್ಥಳದಲ್ಲಿನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಮತ್ತು ನೆಟ್ಟಿಗರು ಹರಕೆ ತೀರಿಸಲು ಶಿಲ್ಪಾ ಶೆಟ್ಟಿ ದೇವಿಯ ದರ್ಶನಕ್ಕೆ ತೆರಳಿರಬಹುದು ಎಂದು ಅಂದಾಜಿಸಿದ್ದಾರೆ. 

ವೈಷ್ಣೋದೇವಿಯ ಗುಹೆಗೆ ಕುದುರೆಯ ಮೇಲೆ ಹೋರಟ ಶಿಲ್ಪಾ ಶೆಟ್ಟಿ, ದಾರಿ ಉದ್ದಕ್ಕೂ ’ಜೈ ಮಾತಾ’ ಎಂದು ಜಪಿಸುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿ ಗೆಳತಿಯೊಂದಿಗೆ ಇಲ್ಲಿಗೆ ಬಂದಿದ್ದರು ಎಂದು ಜಮ್ಮು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ; ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

’ರಾಜ್‌ ಕುಂದ್ರಾ ಅಶ್ಲೀಲ ವಿಡಿಯೊಗೆ ಸಂಬಂಧಪಟ್ಟಂತೆ ಹಾಗೂ ಹಾಟ್‌ಶಾಟ್‌ ಆ್ಯಪ್‌ಗಳ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ನನ್ನ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿರುತ್ತಿದೆ’ ಎಂಬ ಶಿಲ್ಪಾ ಶೆಟ್ಟಿಯ ಹೇಳಿಕೆ ದೋಷಾರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಓದಿ: ಅಶ್ಲೀಲ ಚಿತ್ರಗಳ ನಿರ್ಮಾಣ: ರಾಜ್‌ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು