ಮಂಗಳವಾರ, ನವೆಂಬರ್ 19, 2019
23 °C

ನ. 15ಕ್ಕೆ ‘ಆಯುಷ್ಮಾನ್‌ಭವ’ ಸಿನಿಮಾ ಬಿಡುಗಡೆ

Published:
Updated:
Prajavani

ಪಿ. ವಾಸು ನಿರ್ದೇಶನದ ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್‌ ನಾಯಕ ನಟನಾಗಿರುವ ‘ಆಯುಷ್ಮಾನ್‌ಭವ’ ಸಿನಿಮಾ ನವೆಂಬರ್‌ 15ರಂದು ಬಿಡುಗಡೆಯಾಗಲಿದೆ. 

ನವೆಂಬರ್‌ ಒಂದರಂದು ಈ ಸಿನಿಮಾ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಆದರೆ, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ‍ಪ್ರಮಾಣ ಪತ್ರ ನೀಡಿರಲಿಲ್ಲ. ಈಗ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. 

1996ರ ನವೆಂಬರ್‌ 15ರಂದು ಶಿವರಾಜ್‌ಕುಮಾರ್‌ ನಟನೆಯ ‘ಜನುಮದ ಜೋಡಿ’ ಸಿನಿಮಾ ತೆರೆಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿತ್ತು. ಈ ಚಿತ್ರ ನಿರ್ದೇಶಿಸಿದ್ದು, ಟಿ.ಎಸ್‌. ನಾಗಾಭರಣ. ಎರಡು ದಶಕದ ಬಳಿಕ ಇದೇ ದಿನಾಂಕದಂದು ‘ಆಯುಷ್ಮಾನ್‌ಭವ’ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ‘ಜನುಮದ ಜೋಡಿ’ ಚಿತ್ರದಲ್ಲಿ ಶಿವಣ್ಣ ಕೃಷ್ಣ ಹೆಸರಿನ ಪಾತ್ರದಲ್ಲಿ ಮಿಂಚಿದ್ದರು. ‘ಆಯುಷ್ಮಾನ್‌ಭವ’ ಚಿತ್ರದಲ್ಲೂ ಅವರ ಪಾತ್ರದ ಹೆಸರು ಕೃಷ್ಣ ಎಂಬುದು ವಿಶೇಷ.

ದ್ವಾರಕೀಶ್‌ ಚಿತ್ರಾಲಯ ಸಂಸ್ಥೆಯಿಂದ ಈ ಸಿನಿಮಾ ನಿರ್ಮಿಸಲಾಗಿದೆ. ಶಿವಣ್ಣ ಅವರಿಗೆ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ ಜೋಡಿಯಾಗಿದ್ದಾರೆ. ಅನಂತನಾಗ್, ಶಿವಾಜಿ ಪ್ರಭು, ಸುಹಾಸಿನಿ ಮಣಿರತ್ನಂ, ನಿಧಿ ಸುಬ್ಬಯ್ಯ ತಾರಾಗಣದಲ್ಲಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣವಿದೆ.

ಪ್ರತಿಕ್ರಿಯಿಸಿ (+)