ಗುರುವಾರ , ಅಕ್ಟೋಬರ್ 29, 2020
28 °C

ಅ.16ರಂದು ‘ಶಿವಾಜಿ ಸುರತ್ಕಲ್‌’ ಮರುಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಮೇಶ್‌ ಅರವಿಂದ್‌ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌– ದಿ ಕೇಸ್‌ ಆಫ್‌ ರಣಗಿರಿ ರಹಸ್ಯ’. ಇದೇ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ.

ಮಾರ್ಚ್‌ನಲ್ಲಿ  ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಕೊರೊನಾ ಲಾಕ್‌ಡೌನ್‌ ಬಿಸಿ ಇದಕ್ಕೂ ತಟ್ಟಿತ್ತು. ಒಳ್ಳೆಯ ಆದಾಯ ಗಳಿಕೆ ಇರುವಾಗಲೇ ಪ್ರದರ್ಶನ ರದ್ದಾದ ಪರಿಣಾಮ ಚಿತ್ರತಂಡಕ್ಕೆ ತೀವ್ರ ನಿರಾಶೆಯಾಯಿತು. ಪ್ರೇಕ್ಷಕರು ಕೂಡ ನಿರಾಶೆ ಅನುಭವಿಸುವಂತಾಯಿತು. ನಂತರ ಈ ಚಿತ್ರವನ್ನು ನಿರ್ಮಾಪಕರು ಜೀ5 ಒಟಿಟಿಯಲ್ಲಿ ಆ.7ರಂದು ಬಿಡುಗಡೆ ಮಾಡಿದ್ದರು.

ಆಕಾಶ್ ಶ್ರೀವತ್ಸ ನಿರ್ದೇಶಿಸಿದ ರೊಮ್ಯಾಂಟಿಕ್‌, ಆ್ಯಕ್ಷನ್‌, ಥ್ರಿಲ್ಲರ್‌ ಕಥನದ ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಮೊದಲ ಬಾರಿಗೆ ಪತ್ತೇದಾರಿಯಾಗಿ ನಟಿಸಿದ್ದಾರೆ. ರಾಧಿಕಾ ನಾರಾಯಣ್‌, ಆರೋಹಿ ನಾರಾಯಣ್‌ ತಾರಾಗಣದಲ್ಲಿದ್ದಾರೆ. 

ಈ ಚಿತ್ರಕ್ಕೆ ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ಗುರುಪ್ರಸಾದ್ ಎಂ.ಜಿ. ಅವರ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು