ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣ ಅಭಿನಯದ ‘ಘೋಸ್ಟ್‌’ ಸಿನಿಮಾ– ಅ.18ರ ಮಧ್ಯರಾತ್ರಿ ಫ್ಯಾನ್‌ ಶೋ

Published 9 ಅಕ್ಟೋಬರ್ 2023, 22:17 IST
Last Updated 9 ಅಕ್ಟೋಬರ್ 2023, 22:17 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಈ ವರ್ಷದ ಮೊದಲ ಸಿನಿಮಾ ‘ಘೋಸ್ಟ್‌’ ಅ.19ರಂದು ರಿಲೀಸ್‌ ಆಗುತ್ತಿದೆ. ಅಕ್ಟೋಬರ್ 18ರ ಮಧ್ಯರಾತ್ರಿ 12 ಗಂಟೆಗೆ ಬೆಂಗಳೂರಿನ ಕೆ‌.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಚಿತ್ರದ ಮೊದಲ ಪ್ರದರ್ಶನ(ಫ್ಯಾನ್ ಶೋ) ನಡೆಯಲಿದೆ ಎಂದು ಘೋಷಿಸಿದೆ ಚಿತ್ರತಂಡ. 

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸಿರುವ, ಸಂದೇಶ್ ಎನ್. ನಿರ್ಮಾಣದ ಈ ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ ‘ಭಜರಂಗಿ’ ಚಿತ್ರದ ಪ್ರದರ್ಶನ ಬೆಳಗ್ಗೆ 6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ ‘ಘೋಸ್ಟ್’ ಎಂದಿದೆ ಚಿತ್ರತಂಡ. ಬಹುನಿರೀಕ್ಷಿತ ಈ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ ಶಿವರಾಜ್‌ಕುಮಾರ್‌ ಅವರ ಹಲವು ಶೇಡ್ಸ್‌ ಪರಿಚಯಿಸಿದೆ.

ಅ.11ರಂದು ಹೊಸಪೇಟೆ ಮೀರಾಲಂ ಚಿತ್ರಮಂದಿರದಲ್ಲಿ ‘ಘೋಸ್ಟ್‌ ಫ್ಯಾಂಥಮ್‌’ ಬಿಡುಗಡೆಯಾಗಲಿದ್ದು, ಅಭಿಮಾನಿಗಳೇ ಇದನ್ನು ರಿಲೀಸ್‌ ಮಾಡುತ್ತಿರುವುದು ವಿಶೇಷವಾಗಿರಲಿದೆ. ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ರಿಲೀಸ್‌ ಆಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT