ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಲಿದೆ ಶಿವಣ್ಣನ ಹೊಸ ಚಿತ್ರ: ಕೊಟ್ರೇಶ್‌ ನಿರ್ದೇಶನ

Published : 10 ಜುಲೈ 2022, 9:48 IST
ಫಾಲೋ ಮಾಡಿ
Comments

ನಟ ಶಿವರಾಜ್‌ ಕುಮಾರ್ ಅಭಿನಯದ ಹೊಸ ಚಿತ್ರವೊಂದು ಸೆಟ್ಟೇರಿದೆ. ಇದುವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಕೊಟ್ರೇಶ್‌ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಿವರಾಜ್‌ಕುಮಾರ್‌ ಅವರ ‘ವಜ್ರಕಾಯ’, ‘ಬಂಗಾರ ಸನ್‌ ಆಫ್‌ ಬಂಗಾರ’ ಚಿತ್ರಗಳಿಗೆ ಕೊಟ್ರೇಶ್‌ ಸಹ ನಿರ್ದೇಶಕರಾಗಿದ್ದರು.

ಜುಲೈ 12ರಂದು ಚಿತ್ರದ ಹೆಸರು ಘೋಷಣೆ ಆಗಲಿದೆ. ‘ಶಿವರಾಜ್‌ಕುಮಾರ್‌ ಅವರಂಥ ಅದ್ಭುತ ನಟನ ಚಿತ್ರ ನಿರ್ದೇಶಿಸುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ. ನನಗೆ ನಿರ್ದೇಶನ ಮಾಡಲು ಅವಕಾಶ ನೀಡಿರುವ ಶಿವಣ್ಣ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಾಕಷ್ಟು ಶ್ರಮವಹಿಸುತ್ತೇನೆ. ಈಗ ಚಿತ್ರೀಕರಣ ನಡೆಸುವ ಸ್ಥಳಗಳ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಶೂಟಿಂಗ್‌ ಆರಂಭವಾಗಲಿದೆ’ ಎಂದು ನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.

‘ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಉತ್ಸುಕನಾಗಿದ್ದೇನೆ. ನಾನು ನಟಿಸಿರುವ ಮೂರು ಚಿತ್ರಗಳಲ್ಲಿ ಕೊಟ್ರೇಶ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ’ ಕೊಟ್ರೇಶ್ ಅವರಿಗೆ ಶುಭವಾಗಲಿ ಎಂದು ಶಿವಣ್ಣ ಹಾರೈಸಿದ್ದಾರೆ.

ಎಆರ್‌ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಜನಪ್ರಿಯ ಸಂಭಾಷಣೆಕಾರ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಮಾಸ್ತಿ, ಕೊಟ್ರೇಶ್ ಹಾಗೂ ಅಭಿ ಚಿತ್ರಕಥೆ ಬರೆದಿರುವ ಈ ನೂತನ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಸೋಹಿತ್ ನೀಲಮ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಸಹ ಈ ಚಿತ್ರಕ್ಕಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT