ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

Sandalwood | ಸಿನಿಪಯಣದಲ್ಲಿ ಶಿವರಾಜ್‌ಕುಮಾರ್‌ @40

Published : 12 ಜೂನ್ 2025, 23:30 IST
Last Updated : 12 ಜೂನ್ 2025, 23:30 IST
ಫಾಲೋ ಮಾಡಿ
Comments
ನಿಮ್ಮ 40 ವರ್ಷಗಳ ಅದ್ಭುತ ಚಲನಚಿತ್ರ ಪ್ರಯಾಣದ ಒಂದು ಭಾಗವನ್ನು ಹತ್ತಿರದಿಂದ ನೋಡಿ, ಅನುಭವಿಸೋ ಅವಕಾಶ ಪಡೆದಿರುವುದು ನನಗೆ ಅತ್ಯಂತ ಗೌರವದ ವಿಷಯ. ನೀವು ಈ ಚಿತ್ರರಂಗಕ್ಕೆ ಕುಗ್ಗದ ಆಸಕ್ತಿ, ಅಪಾರ ಶ್ರಮ ಮತ್ತು ಘನತೆಯಿಂದ ಸೇವೆ ಸಲ್ಲಿಸಿದ್ದೀರಿ. ನೀವು ಸ್ಥಾಪಿಸಿದ ಮಾದರಿ ಭವಿಷ್ಯದಲ್ಲಿ ಹಲವು ಪೀಳಿಗೆಗಳಿಗೆ ಪ್ರೇರಣೆಯಾಗಲಿ. ನೀವು ಯಶಸ್ಸನ್ನು ಸದಾ ಸರಳವಾಗಿ ನಿಭಾಯಿಸಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನೀವು ಸದಾ ಒಬ್ಬ ಉತ್ತಮ ಮನುಷ್ಯರಾಗಿ ಬಾಳಿದ್ದೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರಲಿ ಮತ್ತು ಇನ್ನೂ ಹಲವಾರು ವರ್ಷಗಳ ಕಾಲ ನಿಮ್ಮ ಅಭಿನಯದಿಂದ ನಮಗೆ ಮನರಂಜನೆ ದೊರೆಯಲಿ. 
–ಕಿಚ್ಚ ಸುದೀಪ್‌, ನಟ 
ಮೊದಲಿಗೆ ಅಭಿನಂದನೆ. 40 ವರ್ಷ ಎಂದರೆ ದೊಡ್ಡ ಪಯಣ. ಸತತವಾಗಿ ಕೆಲಸ ಮಾಡಿ ಹಲವು ಪಾತ್ರಗಳನ್ನು ಮಾಡಿದ್ದೀರಿ. ಇದರಲ್ಲಿ ದಾಖಲೆಯನ್ನೇ ಮಾಡಿದ್ದೀರಿ. ಹೊಸಬರ ಜೊತೆ, ಕಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀರಿ. ಚಿತ್ರರಂಗಕ್ಕೆ ನೀವು ನೀಡಿದ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿ. ಈ ಪಯಣದಲ್ಲಿ ನಿಮ್ಮ ಜೊತೆ ಒಂದೆರಡು ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ, ಇದನ್ನು ಸಂಭ್ರಮಿಸಿದ್ದೇನೆ. 50 ವರ್ಷದ ಸಂಭ್ರಮವನ್ನು ಬಹಳ ಜೋರಾಗಿ ಆಚರಿಸೋಣ.  
–ಧನಂಜಯ, ನಟ 
ನನ್ನ ವಯಸ್ಸು 35, ನೀವು ಈ ರಂಗಕ್ಕೆ ಬಂದು 40 ವರ್ಷವಾಗಿದೆ. ನಿಮ್ಮ ಅಭಿಮಾನಿಯಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನಿಮಗೆ ಭಗವಂತ ಆರೋಗ್ಯ ಕೊಡಲಿ, ಎನರ್ಜಿಯನ್ನು ಮೊದಲೇ ಕೊಟ್ಟಾಗಿದೆ. ಹೊಸಬರಿಗೆ ನೀವು ಸ್ಫೂರ್ತಿ.  
–ಧ್ರುವ ಸರ್ಜಾ, ನಟ 
ಕನ್ನಡ ಕಂಠೀರವ ವರನಟ ರಾಜ್‌ಕುಮಾರ್‌ ಅವರ ಜೊತೆ ನನಗೆ ವಿಶೇಷ ಸ್ನೇಹವಿತ್ತು. ಅವರಿಂದ ಸಿಕ್ಕ ಪ್ರೀತಿ ಅಗಾಧ. ಅವರ ಮನೆಗೆ ಭೇಟಿ ನೀಡಿದಾಗ ನನಗೆ ಪರಿಚಯವಾದವರು ಶಿವಣ್ಣ, ಅಪ್ಪು ಮತ್ತು ರಾಘವೇಂದ್ರ ಅವರ ಪರಿಚಯವಾಯಿತು. ತದನಂತರ ಇವರೂ ನನ್ನ ಕುಟುಂಬದ ಭಾಗವಾದರು. ಶಿವಣ್ಣ ನಾಯಕನಾಗಿ ಹೆಜ್ಜೆ ಇಟ್ಟು ಸೂಪರ್‌ಸ್ಟಾರ್‌ ಆಗಿ ಬೆಳೆದ ಬಗೆ ಅಭೂತ. ತಂದೆಯ ಹಾದಿಯಲ್ಲಿ ಹೆಜ್ಜೆ ಹಾಕಿ ತನ್ನದೇ ಅಭಿಮಾನಿ ಬಳಗವನ್ನು ಗಳಿಸಿದವರು, ಅವರಿಂದ ಪ್ರೀತಿ ಪಡೆದವರು. ಶಿವಣ್ಣನ ಈ ಮೈಲುಗಲ್ಲು ನೋಡಿ ಖುಷಿಯಾಗುತ್ತಿದೆ. 
–ಚಿರಂಜೀವಿ, ನಟ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT