ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಈ ಮೂವರ ಸಂಯೋಜನೆಯಲ್ಲಿ ‘45‘ ಸಿನಿಮಾ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ಅವರ ನಿರ್ದೇಶನದಲ್ಲಿ ಈ ಮೂವರು ಜನಪ್ರಿಯ ನಟರು ಅಭಿನಯಿಸಿದ್ದಾರೆ. ಇದೇ ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ದಿನದಂದು ‘45‘ ಸಿನಿಮಾ ಬಿಡುಗಡೆಯಾಗಲಿದೆ.
.ಬಿಡುಗಡೆಗೂ ಮುನ್ನವೇ ‘45’ ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ಹಕ್ಕು ಜೀ ಪಾಲು.‘45’ ಸಿನಿಮಾ ಟ್ರೇಲರ್ಗೆ ಭರ್ಜರಿ ರೆಸ್ಪಾನ್ಸ್: ವಿಭಿನ್ನ ಗೆಟಪ್ನಲ್ಲಿ ಶಿವಣ್ಣ.
ನಿನ್ನೆಯಷ್ಟೇ (ಡಿಸೆಂಬರ್ 15) ಸಂಜೆ 6.45ಕ್ಕೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ‘45’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷ ಏನೆಂದರೆ ಟ್ರೇಲರ್ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ ವಿಚಾರ ಶಿವಣ್ಣ ಸ್ತ್ರೀ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು. ಈ ಹಿಂದೆಯೂ ಕೂಡ ಶಿವಣ್ಣ ಕನ್ನಡ ಸಿನಿಮಾದಲ್ಲಿ ಮಹಿಳಾ ಪಾತ್ರಗಳಲ್ಲಿ ಕಮಾಲ್ ಮಾಡಿದ್ದರು.

ಶಿವಣ್ಣ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. 1996ರಲ್ಲಿ ತೆರೆಕಂಡು, ಸೂಪರ್ ಹಿಟ್ ಆದ ಅಣ್ಣಾವ್ರ ಮಕ್ಕಳು ಸಿನಿಮಾದಲ್ಲಿ ಶಿವರಾಜ್ ಕುಮಾರ್ ತ್ರಿಪಾತ್ರದಲ್ಲಿ ಅಭಿನಯಿಸಿದ್ದರು. ಹೆಣ್ಣಿನ ವೇಷ ಹಾಕಿಕೊಂಡು, ವೇಶ್ಯಾವಾಟಿಕೆ ಮನೆಯನ್ನು ರೈಡ್ ಮಾಡುವ ಸನ್ನಿವೇಶ ಅದಾಗಿತ್ತು. ಫಣಿ ರಾಮಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಲೇಡಿ ಅವತಾರದಲ್ಲಿ ಮಿಂಚಿದ್ದರು.

ಮತ್ತೊಂದು 1992ರಲ್ಲಿ ತೆರೆಕಂಡ ‘ಮಿಡಿದ ಶೃತಿ’ ಸಿನಿಮಾದಲ್ಲೂ ನಟ ಶಿವರಾಜ್ಕುಮಾರ್ ಮಹಿಳಾ ಪಾತ್ರದಲ್ಲಿ ನಟಿಸಿದ್ದರು. ಡ್ರಾಮಾ ಮತ್ತು ರೊಮ್ಯಾಂಟಿಕ್ ಸಿನಿಮಾದಲ್ಲಿ ಶಿವರಾಜ್ಕುಮಾರ್ಗೆ ಜೋಡಿಯಾಗಿ ಸುಧಾರಾಣಿ ನಟಿಸಿದ್ದರು. ಈ ಸಿನಿಮಾವನ್ನು ಎಂ.ಎಸ್. ರಾಜಶೇಖರ್ ನಿರ್ದೇಶಿಸಿದ್ದರು. ಎಸ್.ಎ. ಗೋವಿಂದರಾಜು ನಿರ್ಮಾಣ ಮಾಡಿದ್ದರು. ಇದೀಗ 33 ವರ್ಷಗಳ ಬಳಿಕ ಮತ್ತೆ ಶಿವಣ್ಣ ‘45’ ಸಿನಿಮಾದಲ್ಲಿ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ‘45’ ಸಿನಿಮಾ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.