ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಂತರ ಚಿತ್ರೀಕರಣ ಹೇಗೆ?

Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಹೊರಾಂಗಣ ಚಿತ್ರೀಕರಣ, ಭಾರಿ ಸಂಖ್ಯೆಯ ಜನರು ಇಲ್ಲದೆ ಸಿನಿಮಾ ಮಾಡುವುದೇ? ಸಿನಿಮಾಗಳಲ್ಲಿ ಪಾರ್ಟಿಯ ದೃಶ್ಯಗಳು, ಅಪ್ಪುಗೆಯ ರೊಮ್ಯಾಂಟಿಕ್ ದೃಶ್ಯಗಳು ಇಲ್ಲದಂತೆ ನೋಡಿಕೊಳ್ಳುವುದೇ!? ಕೊರೊನಾ ನಂತರದಲ್ಲಿ ಬಾಲಿವುಡ್ ಜಗತ್ತನ್ನು ಕಾಡಲಿರುವ ಪ್ರಶ್ನೆಗಳು ಇವು.

ಸಿನಿಮಾ ಚಿತ್ರೀಕರಣ ಅಂದರೆ ನೂರಾರು ಜನ ಒಟ್ಟಿಗೆ ಕೆಲಸ ಮಾಡುವುದು, ಸ್ಕ್ರಿಪ್ಟ್‌ನಲ್ಲಿ ಬರಹ ರೂಪದಲ್ಲಿ ಇರುವುದನ್ನು ದೃಶ್ಯರೂಪಕ್ಕೆ ತರುವುದು ಎಂದು ಅರ್ಥ. ಚಿತ್ರೀಕರಣದ ಕೆಲಸಗಳಿಗೆ ಹಸಿರು ನಿಶಾನೆ ದೊರೆತ ನಂತರ, ಚಿತ್ರೀಕರಣದ ಸ್ಥಳಗಳಲ್ಲಿ ಹೆಚ್ಚಿನ ಜನ ಇರದಂತೆ ಮಾಡುವುದು ಹೇಗೆ ಎಂಬ ಬಗ್ಗೆ ಸಿನಿಮಾ ಮಂದಿ ತಲೆಕೆಡಿಸಿಕೊಳ್ಳುತ್ತಿದ್ದಾರೆ.

‘ಸಿನಿಮಾ ಕೆಲಸಗಳ ವೇಳೆ ಒಬ್ಬರಿಗೊಬ್ಬರು ಹತ್ತಿರವಾಗಿ ಇರಬಹುದು ಎಂಬ ಸ್ಥಿತಿ ಬರಲು ತುಸು ಹೆಚ್ಚು ಸಮಯ ಬೇಕಾಗುತ್ತದೆ’ ಎಂದು ಹೇಳುತ್ತಾರೆ ನಟ, ನಿರ್ಮಾಪಕ ಸಂಜಯ್ ಸೂರಿ. ಇಬ್ಬರು ಕಲಾವಿದರು ಹತ್ತಿರ ನಿಂತು ನೃತ್ಯ ಮಾಡುವ ದೃಶ್ಯಗಳನ್ನು ಶೀಘ್ರವೇ ನೋಡಬಹುದು ಎಂದು ಹೇಳುವ ಸ್ಥಿತಿಯಲ್ಲಿ ಸಿನಿಮಾ ಮಂದಿ ಇಲ್ಲ.

‘ಚಿತ್ರೀಕರಣದಲ್ಲಿ ಇರುವವರಿಗೆ ಹೆಚ್ಚಿನ ತೊಂದರೆಗಳು ಎದುರಾಗಲಿವೆ. ಹೊರಾಂಗಣ ಚಿತ್ರೀಕರಣದ ಕೆಲಸಗಳಲ್ಲಿ ಭಾಗಿಯಾಗುವ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿ, ಕೆಲಸಕ್ಕೆ ತೊಡಗಿಸಿಕೊಳ್ಳಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಕೊರೊನಾ ಲಾಕ್‌ಡೌನ್‌ ನಂತರ ನಾವು ಬದುಕುವ ರೀತಿಯೇ ಭಿನ್ನವಾಗಿರಲಿದೆ’ ಎಂದು ನಿರ್ದೇಶಕ ಸುಧೀರ್ ಮಿಶ್ರಾ ಹೇಳುತ್ತಾರೆ.

‘ಇವೆಲ್ಲ ಸಮಸ್ಯೆ ಬಗೆಹರಿದ ನಂತರ, ಸಿನಿಮಾ ಜಗತ್ತು ಮುತ್ತಿಕ್ಕುವ, ಅಪ್ಪಿಕೊಳ್ಳುವ ದೃಶ್ಯಗಳನ್ನು ಹೇಗೆ ಚಿತ್ರೀಕರಿಸುತ್ತದೆ ಎಂಬ ಬಗ್ಗೆ ಆಲೋಚಿಸಬೇಕಿದೆ’ ಎಂದು ನಿರ್ದೇಶಕ ಶೂಜಿತ್ ಸರ್ಕಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT