ಬಾಲ್ಕನಿ ಇನ್ಫೊಟೈನ್‌ಮೆಂಟ್ ಮತ್ತು ಪಿಂಕ್‌ಆಟಂ ಫೌಂಡೇಶನ್‌ನಿಂದ ‘ಬಾಲ್ಕನಿ ಲ್ಯೂಮಿಯರ್– ಫಾಲ್ಕೆ’ ಕನ್ನಡ ಕಿರು ಚಲನಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. ಇಡೀ ಸ್ಪರ್ಧೆಯು ಮೂರು ತಿಂಗಳ ಕಾಲ ನಡೆಯಲಿದೆ. ಬರುವ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಫೈನಲ್ ನಡೆಯಲಿದೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. 3ರಿಂದ 15 ನಿಮಿಷ ಅವಧಿಯ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಸ್ಪರ್ಧೆಯ ಲೋಗೊವನ್ನು ಬಿಡುಗಡೆಗೊಳಿಸಿದರು. ‘ಸಮಾಜದಲ್ಲಿ ಎಲ್ಲವೂ ಅರ್ಧಕ್ಕೆ ಮೊಟಕಾಗುತ್ತಿದೆ. ನಾವು ಧರಿಸುವ ಉಡುಪುಗಳು ಇದರಿಂದ ಹೊರತಲ್ಲ. ಬಿಗ್‌ಸ್ಕ್ರೀನ್ ಚಿತ್ರಗಳು ಈಗ ಕಿರುಚಿತ್ರದ ರೂಪ ಪಡೆದಿವೆ. ಹೊಸಬರಿಗೆ ಇದೊಂದು ಉತ್ತಮ ವೇದಿಕೆ’ ಎಂದು ಶುಭ ಕೋರಿದರು.

‘ಸ್ಪರ್ಧೆಗೆ ಬರುವ ಎಲ್ಲ ಕಿರುಚಿತ್ರಗಳನ್ನು ಆನ್‌ಲೈನ್, ಯುಟ್ಯೂಬ್‌ನಲ್ಲಿ ಬಿತ್ತರಿಸ ಲಾಗುತ್ತದೆ. ಪ್ರಥಮ ಬಹುಮಾನ ₹ 3 ಲಕ್ಷ ಮತ್ತು ದ್ವಿತೀಯ ಬಹುಮಾನ ₹ 1.50 ಲಕ್ಷ ನಿಗದಿಪಡಿಸಲಾಗಿದೆ. ವಿವಿಧ ವಿಭಾಗದಲ್ಲಿ ಬಹುಮಾನ ನೀಡಲಾಗುತ್ತದೆ. ಜಾಗತಿಕಮಟ್ಟದಲ್ಲಿ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವುದೇ ಸ್ಪರ್ಧೆಯ ಉದ್ದೇಶ’ ಎನ್ನುತ್ತಾರೆ ಬಾಲ್ಕನಿ ನ್ಯೂಸ್.ಕಾಮ್‌ನ ಮುಖ್ಯಸ್ಥ ಮೆಲ್ವಿನ್.

ಅರುಂಧತಿ ನಾಗ್, ನಾಗತಿಹಳ್ಳಿ ಚಂದ್ರಶೇಖರ್, ಸಿ. ಬಸವಲಿಂಗಯ್ಯ, ಅರ್ಜುನ್ ಜನ್ಯ, ರೂಪಾ ಅಯ್ಯರ್, ಚಿಂತನ್ ಎ.ವಿ., ಕೆ.ಎಂ. ಪ್ರಕಾಶ್, ಸಂತೋಷ್ ರೈ ಪಾತಾಜೆ ಜ್ಯೂರಿಗಳಾಗಿದ್ದಾರೆ. ಯೋಗರಾಜ್ ಭಟ್ ಸ್ಪರ್ಧೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಿರ್ದೇಶಕಿ ರೂಪಾ ಅಯ್ಯರ್, ‘ಕಿರುಚಿತ್ರ ನಿರ್ಮಿಸುವುದು ಕೂಡ ಸುಲಭವಲ್ಲ. ಇದಕ್ಕೂ ಕೂಡ ಸಾಕಷ್ಟು ಹಣ ಬೇಕಾಗುತ್ತದೆ. ದೊಡ್ಡ ಚಿತ್ರಗಳನ್ನು ತಯಾರಿಸುವಷ್ಟೇ ಪರಿಶ್ರಮವೂ ಇದಕ್ಕೆ ಬೇಕು’ ಎಂದರು.

ನಟಿ ಸುಮನ್ ನಗರ್‌ಕರ್, ನಿರ್ದೇಶಕ ಚೇತನ್ ಶುಭ ಕೋರಿದರು. ಪಿಂಕ್‌ಆಟಂ ಫೌಂಡೇಶನ್‌ನ ಸದಸ್ಯ ಡಾ.ಭರತ್ ಚಂದ್ರನ್ ಹಾಜರಿದ್ದರು.

ಹೆಚ್ಚಿನ ಮಾಹಿತಿ ಮೊಬೈಲ್ 88844 44254 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.