ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೈ ಟು ಲವ್’ ಮೂಲಕ ಜೋಡಿಯಾಗಲಿದ್ದಾರೆ ಶ್ರೀಲೀಲಾ–ಧನ್ವೀರ್‌

Last Updated 25 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

‘ಕಿಸ್‌’ ಹಾಗೂ ‘ಭರಾಟೆ’ ಖ್ಯಾತಿಯ ನಟಿ ಶ್ರೀಲೀಲಾ ಹಾಗೂ ಧನ್ವೀರ್ ನಟನೆಯ ‘ಬೈ ಟೂ ಲವ್’ ಚಿತ್ರ ಇಂದು ಸೆಟ್ಟೇರಿದೆ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಶ್ರೀ ಬಂಡಿಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು.

ಮೊದಲ ಸನ್ನಿವೇಶಕ್ಕೆ ಕಾಶ್ವಿ ವೆಂಕಟ್ ಆರಂಭ ಫಲಕ ತೋರಿದರು. ಸಿದ್ದು ವೆಂಕಟ್ ಕ್ಯಾಮೆರಾ ಚಾಲನೆ ಮಾಡಿದರು.

ಹರಿ ಸಂತೋಷ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ. ಸಾಧುಕೋಕಿಲ, ಅಚ್ಯುತಕುಮಾರ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರ ತಾರಾಬಳಗ ಬೈ ಟೂ ಲವ್‌ನಲ್ಲಿದೆ. ಇದು ಹರಿ ಸಂತೋಷ್ ನಿರ್ದೇಶನದ 9ನೇ ಚಿತ್ರ.

ಕೆ.ವಿ.ಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ಸಂಸ್ಥೆ ನಿರ್ಮಾಣದ ಮೂರನೇ ಚಿತ್ರ.

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

ಜನವರಿ 4 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ಎಚ್‌ ಎಂಟಿ ಬಳಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT