ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಮಾ‘ ತಡ ರಾತ್ರಿ ಪಾರ್ಟಿ: ನಟ ಯಶ್‌, ಅಭಿಷೇಕ್‌ ಅಂಬರೀಷ್‌ ಭಾಗಿ; ದೂರು ದಾಖಲು

Last Updated 21 ಸೆಪ್ಟೆಂಬರ್ 2022, 10:02 IST
ಅಕ್ಷರ ಗಾತ್ರ

ಬೆಂಗಳೂರು:ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ) ಪ್ರದಾನ ಸಮಾರಂಭ ಇತ್ತೀಚೆಗೆ ನಡೆದಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಶನಿವಾರ (ಸೆ.11)ದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿತ್ತು.ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ನಟ, ನಟಿಯರು ಭಾಗವಹಿಸಿದ್ದರು.

ಪಾರ್ಟಿ
ಪಾರ್ಟಿ

ಈ ಕಾರ್ಯಕ್ರಮದ ಬಳಿಕ ಖಾಸಗಿ ಹೊಟೇಲ್‌ನಲ್ಲಿ ನಟ, ನಟಿಯರು ರಾತ್ರಿ 3.30ರವರೆಗೂಪಾರ್ಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ದೂರು ದಾಖಲಾಗಿದೆ.

ಸೈಮಾ ಪಾರ್ಟಿಯಲ್ಲಿ ‘ರಾಕಿಂಗ್ ಸ್ಟಾರ್’ ಯಶ್ (Yash), ಅಭಿಷೇಕ್ ಅಂಬರೀಷ್ (Abhishek Ambareesh) ಭಾಗಿಯಾಗಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಮಯನಿಯಮ ಮೀರಿ ಪಾರ್ಟಿ ಮಾಡಿದ್ದಾರೆ ಎಂಬ ಆರೋಪಕೇಳಿ ಬಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಸಾಮಾನ್ಯರಿಗೆ ಒಂದು ಕಾನೂನು, ಸೆಲೆಬ್ರಿಟಿಗಳಿಗೆ ಒಂದು ಕಾನೂನೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್‌ ಅಭಿನಯದ, ಸುಕುಮಾರ್‌ ನಿರ್ದೇಶನದ ‘ಪುಷ್ಪ ದಿ ರೈಸ್‌’(ತೆಲುಗು) ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. ಇದೇ ಚಿತ್ರದ ಅಭಿನಯಕ್ಕಾಗಿ ನಟ ಅಲ್ಲು ಅರ್ಜುನ್‌ ಅವರು ಅತ್ಯುತ್ತಮ ನಟ, ನಿರ್ದೇಶಕ ಸುಕುಮಾರ್‌ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಯುವರತ್ನ ಚಿತ್ರಕ್ಕಾಗಿ ಮರಣೋತ್ತರವಾಗಿ ಉತ್ತಮ ನಾಯಕ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT