ಬುಧವಾರ, ಏಪ್ರಿಲ್ 21, 2021
32 °C

ಗಾಯಕ ರಾಹುಲ್‌ ಸಿಪ್ಲಿಗಂಜ್‌ಗೆ ತೆಲುಗು ಬಿಗ್‌ಬಾಸ್‌–3 ಕಿರೀಟ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಟ ನಾಗಾರ್ಜುನ್‌ ಅಕ್ಕಿನೇನಿ ನಡೆಸಿಕೊಡುವ ತೆಲುಗಿನ ಬಿಗ್‌ಬಾಸ್‌ 3 ವಿನ್ನರ್ ಪಟ್ಟವನ್ನು ಗಾಯಕ ರಾಹುಲ್‌ ಸಿಪ್ಲಿಗಂಜ್‌ ಪಡೆದುಕೊಂಡಿದ್ದಾರೆ.

ಗ್ರಾಂಡ್‌ ಫಿನಾಲೆ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಬಂದಿದ್ದ ನಟ ಚಿರಂಜೀವಿ ಬಿಗ್‌ಬಾಸ್‌ 3 ವಿನ್ನರ್‌ ಅನ್ನು ಘೋಷಿಸಿದರು. ರಾಹುಲ್‌ ವಿನ್ನರ್‌ ಟ್ರೋಫಿ ಜೊತೆಗೆ ₹50 ಲಕ್ಷ ನಗದು ಬಹುಮಾನವನ್ನು ಪಡೆದರು.

ಜುಲೈ 21ರಂದು ತೆಲುಗಿನ ಬಿಗ್‌ಬಾಸ್‌ 3 ಶುರುವಾಗಿತ್ತು. ಗ್ರಾಂಡ್‌ ಫಿನಾಲೆ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಜೊತೆಗೆ ಕಲಾವಿದರಾದ ಶ್ರೀಕಾಂತ್‌, ನಿಧಿ ಅಗರ್ವಾಲ್, ಅನುರಾಗ್‌ ಕುಲಕರ್ಣಿ, ಅಂಜಲಿ, ರಾಶಿ ಖನ್ನಾ, ನಿರ್ದೇಶಕ ಮಾರುತಿ ಕೂಡ ವೇದಿಕೆ ಹಂಚಿಕೊಂಡಿದ್ದರು.

ಕೊನೆಗೆ ಉಳಿದಿದ್ದ 5 ಸ್ಪರ್ಧಿಗಳಲ್ಲಿ ಮೊದಲು ಮನೆಯಿಂದ ಹೊರನಡೆದದ್ದು, ಅಲಿ ರೆಜ, ನಂತರ ವರುಣ್‌ ಸಂದೇಶ್‌ ಎಲಿಮಿನೇಟ್‌ ಆದರು. ಮೂರನೆಯದಾಗಿ ಬಾಬಾ ಭಾಸ್ಕರ್‌ ಹೊರ ಹೋದರು. ಕೊನೆಯದಾಗಿ ಮನೆಯಲ್ಲಿ ಉಳಿದದ್ದು, ಇಬ್ಬರು ಅಭ್ಯರ್ಥಿಗಳೆಂದರೆ ಶ್ರೀಮುಖಿ ಮತ್ತು ರಾಹುಲ್‌.

ವಿನ್ನರ್‌ ಘೋಷಿಸಲೆಂದೇ ವೇದಿಕೆ ಬಂದ ಚಿರಂಜೀವಿ, 'ಪತ್ನಿಯ ಒತ್ತಾಯದ ಮೇರೆಗೆ ಬಿಗ್‌ಬಾಸ್‌ ಕಾರ್ಯಕ್ರಮ ನೋಡುತ್ತಿದ್ದೆ. ಹಾಗಾಗಿ ಪ್ರತಿಯೊಬ್ಬರ ಬಿಗ್‌ಬಾಸ್‌ ಜರ್ನಿಯೂ ನನಗೆ ಗೊತ್ತು' ಎಂದು ಹೇಳುತ್ತಾ, ವಿನ್ನರ್‌ ಘೋಷಿಸಿಯೇ ಬಿಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು