ಶನಿವಾರ, ಡಿಸೆಂಬರ್ 14, 2019
22 °C

ಹೊಸ ಅವತಾರದಲ್ಲಿ ರಾನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆಲ್ಫಿ ತೆಗಿಸಿಕೊಳ್ಳಲು ಬಂದ ಅಭಿಮಾನಿ ಮೇಲೆ ರೇಗುವ ಮೂಲಕ ಸುದ್ದಿಯಾಗಿದ್ದ ರಾನು ಮಂಡಲ್‌ ಮತ್ತೆ ಸುದ್ದಿಯಲ್ಲಿದ್ದಾರೆ! ಈ ಬಾರಿ  ಅತಿ ಎನಿಸುವಷ್ಟು ಮೇಕಪ್‌ ಮಾಡಿಕೊಳ್ಳುವ ಮೂಲಕ ನೆಟ್ಟಿಗರು ಮತ್ತು ಟ್ರೋಲಿಗರಿಗೆ ಆಹಾರವಾಗಿದ್ದಾರೆ. 

ಹೊಳೆಯುವ ಚಿನ್ನದಂತಹ ಬಣ್ಣವನ್ನು ಮುಖಕ್ಕೆ ಮೆತ್ತಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಅವರ ಹೊಸ ಅವತಾರ ಕಂಡು ನೆಟ್ಟಿಗರು ದಂಗಾಗಿದ್ದಾರೆ. ರಾನು ಮೇಕ್‌ ಓವರ್ ಭಾರಿ ಅಪಾಹಸ್ಯಕ್ಕೆ ಗುರಿಯಾಗಿದೆ. 

ಕೋಲ್ಕತ್ತದ ರಾಣಾಘಾಟ್‌ ರೈಲ್ವೆ ಪ್ಲಾಟ್‌ಫಾರಂನಲ್ಲಿ ತನ್ನಷ್ಟಕ್ಕೆ ತಾನು ಗುನುಗುತ್ತಿದ್ದ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡು ರಾನು ಮಂಡಲ್‌ ಜೀವನದ ಗತಿಯನ್ನೇ ಬದಲಿಸಿತು. ಗಾಯಕ ಹಿಮೇಶ್ ರೇಷಮಿಯಾ ಅವರ 'ತೆರಿ ಮೇರಿ ಕಹಾನಿ' ಹಾಡಿನ ಮೂಲಕ ಬಾಲಿವುಡ್‌ ಅಂಗಳಕ್ಕೂ ಕಾಲಿಟ್ಟರು.  

ಈಚೆಗೆ ಕಾನ್ಪುರದ ಮೇಕ್‌ ಓವರ್‌ ಸಲೂನ್‌ ಉದ್ಘಾಟನೆಗೆ ಬಂದಿದ್ದ ರಾನು ಮಂಡಲ್‌ ಮೇಲೆ ಸಲೂನ್‌ ಒಡತಿ ಸಂಧ್ಯಾ ತಮ್ಮ ಕೈಚಳಕ ತೋರಿಸಿದ್ದಾರೆ. ಪೀಚ್‌ ಬಣ್ಣದ ಲೆಹಂಗಾ ಮತ್ತು ಮೈಮೇಲೆ ಭಾರ ಎನಿಸುವಷ್ಟು ಆಭರಣ ತೊಟ್ಟ ರಾನು ಫ್ಯಾಶನ್‌ ಚಿತ್ರದ ಹಾಡಿಗೆ  ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಾರೆ.

ಮೈಮೇಲೆ ಧರಿಸಿದ್ದ ರಾಶಿ, ರಾಶಿ ಒಡವೆಗಳು ಮತ್ತು ಅತಿಯಾದ ಮೇಕಪ್‌ ಅನ್ನು ಅಪಹಾಸ್ಯ ಮಾಡುವ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದೇಕೋ ಗೊತ್ತಿಲ್ಲ ರಾನು ಮಂಡಲ್‌ ಇತ್ತೀಚೆಗೆ ಏನೇ ಮಾಡಿದರೂ ಸುದ್ದಿಯಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು