ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಹೋಲುವ ನಟಿ ಎಂದೇ ಗಮನ ಸೆಳೆದಿರುವ ನಟಿ ಸ್ನೇಹಾ ಉಲ್ಲಾಳ್ ಈಗ ಮತ್ತೆ ಸುದ್ದಿಯಾಗಿದ್ದಾರೆ.

ಭಾರತೀಯ ಸಾಂಪ್ರದಾಯದಂತೆ ಮದುಮಗಳ ಉಡುಪು ಧರಿಸಿರುವ ಸ್ನೇಹಾ ಉಲ್ಲಾಳ್, ಇನ್ಸ್ಟಾಗ್ರಾಂನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಐಶ್ವರ್ಯಾ ರೈ ಅವರನ್ನು ಹೋಲುತ್ತಿದ್ದು, ಅಭಿಮಾನಿಗಳು ತಕ್ಷಣ ಪ್ರತಿಕ್ರಿಯಿಸಿದ್ದಾರೆ.

ಮಮತಾ ಶರ್ಮಾ ಎಂಬಾಕೆ, ಐಶ್ವರ್ಯಾ ರೈ ಅವರ ಜೆರಾಕ್ಸ್ ಕಾಪಿ ಎಂದು ಕಾಮೆಂಟಿಸಿದ್ದಾರೆ. ಇನ್ನೊಬ್ಬರು ಒಂದು ಕ್ಷಣಕ್ಕೆ ಐಶ್ವರ್ಯಾ ರೈ ಎಂದೇ ಭಾವಿಸಿದ್ದೆ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ 'ಲಕ್ಕಿ-ನೋ ಟೈಮ್ ಫಾರ್ ಲವ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿರುವ ಸ್ನೇಹಾ, ಐಶ್ವರ್ಯಾ ರೈ ಅವರನ್ನು ಹೋಲುವ ಸೌಂದರ್ಯಕ್ಕಾಗಿ ಹೆಚ್ಚಿನ ಮನ್ನಣೆಗೆ ಪಾತ್ರವಾಗಿದ್ದರು.

ಇದನ್ನೂ ಓದಿ:ಲಾಸ್ ಏಂಜಲಿಸ್: ಆಸ್ಕರ್ ಪ್ರಶಸ್ತಿ ಸಮಾರಂಭ ಮುಂದೂಡಿಕೆ

ಈ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ಸ್ನೇಹಾ ಉಲ್ಲಾಳ್, 'ನಾನು ಐಶ್ಚರ್ಯಾ ರೈ ಅವರ ದೊಡ್ಡ ಅಭಿಮಾನಿ. ಆದರೆ ನನ್ನನ್ನು ಆಕೆಯೊಂದಿಗೆ ಹೋಲಿಕೆ ಮಾಡುವುದರ ಬಗ್ಗೆ ಖುಷಿಯಿಲ್ಲ. ನಾನು ಪ್ರತ್ಯೇಕವಾಗಿ ಗುರುತಿಸಲು ಬಯಸುತ್ತೇನೆ. ನನ್ನದೇ ಸಾಧನೆಯಿಂದ ಹೆಸರುವಾಸಿಯಾಗಲು ಬಯಸುತ್ತೇನೆ' ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.