ಶುಕ್ರವಾರ, ಜನವರಿ 24, 2020
21 °C

ಬಾಲಯ್ಯ ಜೊತೆ ನಟಿಸಲು ಸೋನಾಲ್‌ಗೆ ಬಲು ಇಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಲಯ್ಯ’ ಎಂದೇ ಕರೆಸಿಕೊಳ್ಳುವ ನಂದಮೂರಿ ಬಾಲಕೃಷ್ಣ ತನ್ನ ಖಡಕ್ ಡೈಲಾಗ್‌ನ ಮೂಲಕ ಅಭಿಮಾನಿಗಳ ಮನ ಗೆದ್ದವರು. ತನ್ನ ವಯಸ್ಸು ಹಾಗೂ ಗ್ಲಾಮರ್‌ನ ಕಾರಣದಿಂದ ಇತ್ತೀಚೆಗೆ ಬಾಲಯ್ಯ ಜೊತೆ ನಟಿಸಲು ನಾಯಕಿಯರ ಕೊರತೆ ಕಾಡುತ್ತಿದೆ ಎಂಬ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿತ್ತು. ಅಷ್ಟೇ ಅಲ್ಲದೇ ಸೆಟ್‌ನಲ್ಲಿ ಅವರು ವರ್ತಿಸುವ ರೀತಿಯ ಬಗ್ಗೆ ಕೇಳಿರುವ ಅನೇಕ ನಟಿಯರು ಅವರ ಜೊತೆಗೆ ನಟಿಸಲು ಭಯಪಡುತ್ತಾರೆ ಎಂಬ ಸುದ್ದಿಯೂ ಇದೆ.

ಆದರೆ ಇದಕ್ಕೆಲ್ಲಾ ತದ್ವಿರುದ್ಧ ಎಂಬಂತೆ ನಟಿ ಸೋನಾಲ್ ಚವ್ಹಾಣ್ ‘ನನಗೆ ಬಾಲಕೃಷ್ಣ ಜೊತೆ ನಟಿಸುವುದು ಇಷ್ಟ’ ಎಂದಿದ್ದಾರೆ. ಬಾಲಯ್ಯ ಜೊತೆ ಕೆಲ ಚಿತ್ರಗಳಲ್ಲಿ ನಟಿಸಿರುವ ಸೋನಾಲ್‌ ಬಹುಭಾಷಾ ನಟಿ. ಆದರೂ ಸದ್ಯಕ್ಕೆ ಆಕೆಯ ಕೈಯಲ್ಲಿ ಯಾವುದೇ ಸಿನಿಮಾ ಆಫರ್ ಇಲ್ಲ. ಆದರೆ ಬಾಲಯ್ಯ ಜೊತೆ ನಟಿಸುವುದು ನನಗೆ ಖುಷಿ ನೀಡುತ್ತದೆ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾರೆ.

‘ಬಾಲಕೃಷ್ಣ ಅವರ ಬಗ್ಗೆ ಇದ್ದ ರೂಮರ್‌ಗಳನ್ನು ಕೇಳಿ ಮೊದ ಮೊದಲು ಅವರ ಜೊತೆ ನಟಿಸಲು ನಾನು ಭಯಪಟ್ಟಿದ್ದೆ. ಆದರೆ ಅವರ ಜೊತೆ ಕೆಲಸ ಮಾಡಿದ ಮೇಲೆ ಅವರು ಏನು ಎಂಬುದು ನನಗೆ ಅರ್ಥವಾಯಿತು. ಅವರ ಗುಣವನ್ನು ಅರ್ಥಮಾಡಿಕೊಂಡ ಮೇಲೆ ನಾನು ಅವರ ಜೊತೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ ಸೋನಾಲ್‌. 

'ನನಗೆ ಅವರ ಜೊತೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಬಯಕೆ ಇದೆ. ಅವರು ಎಲ್ಲರಿಗೂ ಗೌರವ ನೀಡುತ್ತಾರೆ. ಜೊತೆಗೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತಾರೆ’ ಎಂದು ಬಾಲಯ್ಯರ ಗುಣಗಾನ ಮಾಡಿದ್ದಾರೆ.
ಸೋನಾಲ್ ಇಂದು ಬಿಡುಗಡೆಯಾಗುವ ರೂಲರ್‌ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣಗೆ ಜೋಡಿಯಾಗಿ ನಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು