ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್‌: ನಟಿಗೆ ಶುಭಾಶಯಗಳ ಮಹಾಪೂರ

Last Updated 21 ಆಗಸ್ಟ್ 2022, 6:09 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಸೋನಂ ಕಪೂರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಷಯವನ್ನು ಸೋನಂ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.

ಸೋನಂ ಕಪೂರ್‌ ಅವರು ಬಾಲಿವುಡ್‌ ನಟ ಅನಿಲ್‌ ಕಪೂರ್‌ ಅವರ ಮಗಳು. ಸ್ವತಹ ಅವರೇ ಈ ವಿಷಯವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ತಿಳಿಸಿದ್ದಾರೆ.ಸೋನಂ ಕಪೂರ್ ಅವರ ತಾಯಿ ಸುನೀತಾ ಕಪೂರ್ ಅವರು ಸಹ ಈ ವಿಷಯ ಹಂಚಿಕೊಂಡಿದ್ದಾರೆ. ಸೋನಂ ಮಗುವಿಗೆ ಜನ್ಮ ನೀಡಿರುವುದಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ಸೋನಂ ಕಪೂರ್‌ ಸಪ್ತಪದಿ ತುಳಿದಿದ್ದರು.20.08.2022ರಂದು, ನಾವು ನಮ್ಮ ಸುಂದರ ಗಂಡು ಮಗುವನ್ನು ಹೃದಯದಿಂದ ಸ್ವಾಗತಿಸಿದ್ದೇವೆ. ವೈದ್ಯರು, ದಾದಿಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು. ಇದರಿಂದ ನಮ್ಮ ಜೀವನ ಶಾಶ್ವತವಾಗಿ ಬದಲಾಗಿದೆ ಎಂದು ಸೋನಂ ಕಪೂರ್ ಬರೆದುಕೊಂಡಿದ್ದಾರೆ.

ನಟ ಅನಿಲ್ ಕಪೂರ್ ಮೊಮ್ಮಗನ ಆಗಮನಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸೋನಂ ಮತ್ತು ಆನಂದ್ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇದರಿಂದ ಸಂತೋಷವಾಗಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

2018ರ ಮೇ, 8ರಂದು ಸೋನಂ ಕಪೂರ್ ಹಾಗೂ ಅನಂದ್ ಅಹುಜಾ ಮುಂಬೈನಲ್ಲಿ ವಿವಾಹವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT