ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕಾರ್ಮಿಕರಿಗೆ ನೆರವಾದ ಸೋನು

Last Updated 12 ಮೇ 2020, 19:30 IST
ಅಕ್ಷರ ಗಾತ್ರ

ಸುದೀಪ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದ ‘ವಿಷ್ಣುವರ್ಧನ’ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ್ದವರು ಬಾಲಿವುಡ್‌ ನಟ ಸೋನು ಸೂದ್. ಈಗ ಅವರು ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ನಾಯಕನಂತೆ ಕಾಣಿಸಿದ್ದಾರೆ. ಮುಂಬೈನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಮರಳಿ ಗೂಡಿಗೆ ಬರಲು ನೆರವಾಗಿದ್ದಾರೆ.

ಕಲಬುರ್ಗಿಯ ಕಾರ್ಮಿಕರಿಗೆ ಊರಿಗೆ ಮರಳಲು ಸೋನು ಅವರು ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಯಲ್ಲೇ, ಈ ಕಾರ್ಮಿಕರಿಗಾಗಿ ಸೋನು ಅವರು ಊಟದ ಕಿಟ್‌ನ ವ್ಯವಸ್ಥೆ ಕೂಡ ಮಾಡಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಅನುಮತಿ ಪಡೆದು ಒಟ್ಟು ಹತ್ತು ಬಸ್ಸುಗಳು ಥಾಣೆಯಿಂದ ಕಲಬುರ್ಗಿಯ ಕಡೆ ಸೋಮವಾರವೇ ಹೊರಟಿವೆ. ಒಟ್ಟು 350 ಕಾರ್ಮಿಕರು ಈ ಬಸ್ಸುಗಳಲ್ಲಿ ಇದ್ದರು. ‘ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿ ಭಾರತೀಯನೂ ತನ್ನ ಕುಟುಂಬದ ಸದಸ್ಯರ ಜೊತೆ ಇರಬೇಕು. ಹಾಗಾಗಿ, ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಅನುವಾಗುವಂತೆ ನಾನು ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಂಡೆ’ ಎಂದು ಸೋನು ಹೇಳುತ್ತಾರೆ.

‘ಅವರು ತಮ್ಮ ಊರುಗಳಿಗೆ ತೆರಳಲು ಅಗತ್ಯದ ದಾಖಲೆಗಳನ್ನು ಹೊಂದಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾಡಿಕೊಟ್ಟರು. ಕರ್ನಾಟಕದವರು ತಮ್ಮವರನ್ನು ಬರಮಾಡಿಕೊಂಡರು’ ಎಂದು ಸೋನು ಎರಡೂ ಸರ್ಕಾರಗಳ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ್ದಾರೆ.

ಈಚೆಗೆ ತೆರೆಕಂಡ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಸೋನು, ಅರ್ಜುನನಾಗಿ ನಟಿಸಿದ್ದರು. ಈಗ ಅವರು ವಲಸೆ ಕಾರ್ಮಿಕರ ಪಾಲಿಗೆ ಧರ್ಮರಾಯನಂತೆ ನೆರವಿಗೆ ಬಂದಿದ್ದಾರೆ.

‘ಬೇರೆ ರಾಜ್ಯಗಳ ಕಾರ್ಮಿಕರಿಗೂ ಅವರ ಊರುಗಳಿಗೆ ತೆರಳಲು ಸಹಾಯ ಮಾಡುವ ಕೆಲಸ ಮುಂದುವರಿಸುವೆ’ ಎಂದು ಸೋನು ಹೇಳಿದ್ದಾರೆ. ವಲಸೆ ಕಾರ್ಮಿಕರ ಸಂಕಷ್ಟ ಕಂಡು ಸೋನು ಅವರು ಭಾವುಕರಾಗಿದ್ದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT