ಬಹುಭಾಷಾ ನಟ ಹಾಗೂ ನಿರ್ದೇಶಕ ಸೋನು ಸೂದ್ ಅವರು ಗುಜರಾತ್ನ ವಾರಾಹಿ ಗ್ರಾಮದಲ್ಲಿರುವ ಗೋಶಾಲೆಯೊಂದಕ್ಕೆ ₹22 ಲಕ್ಷ ಹಣಕಾಸು ನೆರವು ನೀಡಿದ್ದಾರೆ.

ಈ ಗೋಶಾಲೆಯಲ್ಲಿ ಗಾಯಗೊಂಡ, ರಕ್ಷಣೆ ಮಾಡಲಾದ ಹಾಗೂ ವಯಸ್ಸಾದ ಹಸುಗಳಿವೆ. ಇವುಗಳ ಆರೈಕೆಗೆ ಅಧಿಕ ಮೇವು ಹಾಗೂ ಇತರೆ ಆಹಾರಗಳನ್ನು ಒದಗಿಸಲು ಹಣಕಾಸಿನ ಸಹಾಯ ಮಾಡಲಾಗಿದೆ ಎಂದು ವರದಿಯಾಗಿದೆ.
.ಹುಟ್ಟುಹಬ್ಬಕ್ಕೆ ಜಿಮ್ ಸದಸ್ಯತ್ವ ಸೋನು ಸೂದ್ ವಿಭಿನ್ನ ಹೆಜ್ಜೆ.
‘ಕೆಲವೇ ಕೆಲವು ಹಸುಗಳಿಂದ ಆರಂಭವಾದ ಈ ಆಶ್ರಮದಲ್ಲಿ ಇಂದು 7,000ಕ್ಕೂ ಹೆಚ್ಚು ಹಸುಗಳಿವೆ. ಇದು ಪ್ರತಿ ವ್ಯಕ್ತಿ ಹಾಗೂ ಹಳ್ಳಿ ಹೆಮ್ಮೆ ಪಡುವ ವಿಷಯವಾಗಿದೆ. ನಾನು ಈ ಸ್ಥಳಕ್ಕೆ ಆಗಾಗ ಭೇಟಿ ನೀಡುತ್ತೇನೆ. ಈ ಆಶ್ರಮದಲ್ಲಿ ಮಾಡುತ್ತಿರುವ ಗೋರಕ್ಷಣೆ ಕಾರ್ಯವನ್ನು ಭಾರತದಾದ್ಯಂತ ಜಾರಿಗೆ ತರಬೇಕು.’ ಎಂದು ಸೋನು ಸೂದ್ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಸುಗಳೊಂದಿಗಿರುವ ಫೋಟೊಗಳನ್ನು ಹಂಚಿಕೊಂಡಿರುವ ಸೋನು ಸೂದ್ ಅವರು ’ಗೋವುಗಳು ನಮ್ಮಿಂದ ಕಾಳಜಿಯನ್ನು ಮಾತ್ರ ಬಯಸುತ್ತವೆ.’ ಎಂದು ಬರೆದಿದ್ದಾರೆ. ಇವರ ನಿರ್ದೇಶನದ ಮೊದಲ ಸಿನಿಮಾ ‘ಫತೇಹ್’ 2025ರಲ್ಲಿ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.