‘ಶೀಘ್ರವೇ, ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಅಪ್‌ಡೇಟ್ ನೀಡುತ್ತೇನೆ’

–ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆಳಿಗ್ಗೆ ಮಾಡಿರುವ ಈ ಟ್ವೀಟ್‌ನತ್ತ ಎಲ್ಲರೂ ಬೆರಗಿನಿಂದ ನೋಡುತ್ತಿದ್ದಾರೆ. ಸಿನಿಪ್ರಿಯರ ತಲೆಯಲ್ಲಿ ಹಲವು ಆಲೋಚನೆಗಳು ಗಿರಕಿ ಹೊಡೆಯುತ್ತಿವೆ. ಯಶ್ ಅಭಿಮಾನಿಗಳಂತೂ ಕುತೂಹಲದ ಮಡುವಿಗೆ ಬಿದ್ದಿರುವುದು ದಿಟ. ಹಾಗಿದ್ದರೆ ಪ್ರಶಾಂತ್ ನೀಲ್ ನೀಡುವ ಅಪ್‌ಡೇಟ್ ಆದರೂ ಏನಿರಬಹುದು ಎಂಬ ಲೆಕ್ಕಾಚಾರದಲ್ಲಿಯೂ ಅಭಿಮಾನಿಗಳು ಮುಳುಗಿದ್ದಾರೆ.

ಬಾಲಿವುಡ್ ನಟ ಸಂಜಯ್ ದತ್ ಎರಡನೇ ಅಧ್ಯಾಯದಲ್ಲಿ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಎಲ್ಲರಿಗೂ ಗೊತ್ತಿದೆ. ಜುಲೈ 29ರಂದು ಸಂಜಯ್ ದತ್ ಅವರ ಹುಟ್ಟುಹಬ್ಬ. ಕಳೆದ ವರ್ಷ ಅದೇ ದಿನದಂದು ಸಂಜು ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆಗೊಳಿಸಿತ್ತು. ಆ ಮೂಲಕ ಸಂಜು ಅಧಿಕೃತವಾಗಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಭಾಗವಾಗಿದ್ದಾರೆ ಎಂದು ಘೋಷಿಸಿತ್ತು.

ಸಂಜು ಜನ್ಮದಿನಕ್ಕೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಉಳಿದಿವೆ. ಈ ನಡುವೆಯೇ ಪ್ರಶಾಂತ್ ನೀಲ್ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ನೀಡುವುದಾಗಿ ಘೋಷಿಸಿದ್ದಾರೆ. ಹಾಗಾಗಿ, ಸಂಜಯ್ ದತ್ ಅವರ ಫಸ್ಟ್‌ಲುಕ್ ಬಿಡುಗಡೆ ಮಾಡಿದರೂ ಅಚ್ಚರಿಪಡಬೇಕಿಲ್ಲ ಎನ್ನುವುದು ಅಭಿಮಾನಿಗಳ ಊಹೆ.

ಯಶ್ ನಾಯಕರಾಗಿರುವ ‘ಕೆಜಿಎಫ್ ಚಾಪ್ಟರ್ 1’ ಕನ್ನಡ ಚಿತ್ರರಂಗದಮಟ್ಟಿಗೆ ಹೊಸ ದಾಖಲೆ ಬರೆದ ಚಿತ್ರ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಏಕಕಾಲಕ್ಕೆ ತೆರೆಕಂಡ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದು ಇದರ ಹೆಗ್ಗಳಿಕೆ.

‘ಕೆಜಿಎಫ್ ಚಾಪ್ಟರ್ 2’ ಮೇಲೂ ನಿರೀಕ್ಷೆ ಹೆಚ್ಚಿರುವುದು ಗುಟ್ಟೇನಲ್ಲ. ಈಗಾಗಲೇ, ಚಿತ್ರದ ಬಹುಮುಖ್ಯ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಒಂದೆರಡು ದಿನಗಳ ಸಣ್ಣಪುಟ್ಟ ಶೂಟಿಂಗ್ ಬಾಕಿಯಿದೆಯಂತೆ. ಒಟ್ಟಾರೆ 100 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ.

ಬಾಲಿವುಡ್ ನಟಿ ರವೀನಾ ಟಂಡನ್ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀನಿಧಿ ಶೆಟ್ಟಿ ಇದರ ನಾಯಕಿ. ಸಂಗೀತ ಸಂಯೋಜಿಸಿರುವುದು ರವಿ ಬಸ್ರೂರ್. ಕಾರ್ತಿಕ್ ಗೌಡ ಅವರ ಛಾಯಾಗ್ರಹಣವಿದೆ. ಹೊಂಬಾಳೆ ಫಿಲ್ಸ್ಮ್‌ನಡಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.